







ಪುತ್ತೂರು: ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಅ.11 ರಂದು ನಡೆಯುವ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ 2025-26ನೇ ಸಾಲಿನ ಎಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.75, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಮೇಲ್ಪಟ್ಟ ಮತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಶೇಷ ಪ್ರತಿಭಾ ಪುರಸ್ಕೃತರಾಗಿರುವ ಸಮಾಜ ಬಾಂಧವರಿಂದ ಅರ್ಜಿ ಆಹ್ವಾನ ಕರೆಯಲಾಗಿದ್ದು, ಅ.8 ರ ಒಳಗಡೆ ತಮ್ಮ ಪೂರ್ಣ ವಿಳಾಸ, ಅಂಕ ಪಟ್ಟಿ, ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಸಂಘದ ಕಛೇರಿಗೆ ಸಲ್ಲಿಸತಕ್ಕದ್ದು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಆಸಕ್ತ ಸಮಾಜ ಬಾಂಧವರು 9148038915, 9448783227, 9482035123, 9632381117 ನಂಬರಿಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಂಘದ ಅಧ್ಯಕ್ಷ ಮಂಜುನಾಥ ಎನ್. ಎಸ್.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












