







ಕಡಬ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ ಪುತ್ತೂರು, ಕಡಬ ತಾಲೂಕು ಪಂಚಾಯತ್, ಕಡಬ ಪಟ್ಟಣ ಪಂಚಾಯತ್ ಹಾಗೂ ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಹಿರಿಯ ನಾಗರಿಕರಿಗಾಗಿ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ ಸೆ.25ರಂದು ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶೆ ಕು. ರಮ್ಯಾ ಆರ್. ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರನ್ನು ದೇವರಂತೆ ಗೌರವಿಸಿ, ವೃದ್ಧಾಪ್ಯದಲ್ಲಿ ಅವರ ಯೋಗಕ್ಷೇಮ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಸಲಹೆ ನೀಡಿದರು.



ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಮಾತನಾಡಿ, ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಮನೆಯಲ್ಲೇ ಆರೈಕೆ ಮಾಡಬೇಕು ಎಂದರು.
ಕಡಬ ತಾಲೂಕು ಪಂಚಾಯತ್ ವ್ಯವಸ್ಥಾಪಕ ನಾರಾಯಣ ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಡಬ ಉಪ ತಹಶೀಲ್ದಾರ್ ಎಸ್.ಎನ್. ಶಾಯದುಲ್ಲಾ ಖಾನ್, ಸಿಆರ್‌ಪಿ ಗಣೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪುಷ್ಪಾವತಿ ಡಿ., ಕಡಬ ಪೊಲೀಸ್ ಉಪನಿರೀಕ್ಷಕ ಶಿವರಾಮ ಡಿ., ಯುವ ಸಬಲೀಕರಣ ಇಲಾಖೆಯ ಮೇಲ್ವಿಚಾರಕ ಮಾಮಚ್ಚನ್ ಎಂ., ನಿವೃತ್ತ ಸಂಚಾರ ನಿಯಂತ್ರಕ ಅಬ್ಬಾಸ್ ಕುಂತೂರು, ನಿವೃತ್ತ ಪಿಡಿಒ ಆನಂದ ಕುಟ್ರುಪ್ಪಾಡಿ, ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲೆ ಅರ್ಪಿತಾ ಪಿ. ಅವರು ಹಿರಿಯ ನಾಗರಿಕರ ಹಕ್ಕುಗಳ ಕುರಿತು, ಸುಜಾತಾ ಅವರು ಬ್ಯಾಂಕ್ ಸೌಲಭ್ಯ, ಹಿರಿಯ ನಾಗರಿಕರ ಗುರುತಿನ ಚೀಟಿ, ಪಿಂಚಣಿ ಹಾಗೂ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನಿಂದ ಆಗಮಿಸಿದ್ದ ವಿನೀತ್ ಕೌಶಿಕ್ ಹಾಗೂ ಡಾ. ವೈಜಯಂತಿ ಅವರು ಆರೋಗ್ಯ ಕುರಿತು ಸಂವಾದ ನಡೆಸಿದರು.
ವಿಜಯ್ ಕುಮಾರ್ ಎರ್ಕ ಹಾಗೂ ಸುನಿಲ್ ಪಿ.ವಿ. ಕಾರ್ಯಕ್ರಮ ನಿರೂಪಿಸಿದರು. ತುಳಸಿ ಸ್ವಾಗತಿಸಿ, ಪ್ರಶಾಂತಿ ಆನಂದ ಗೌಡ ವಂದಿಸಿದರು.










