







ಪುತ್ತೂರು:ಪುತ್ತೂರು ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆಯು ಸೆ.23ರಂದು ಸರಕಾರಿ ನೌಕರರ ಸಂಘದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ಮಾತನಾಡಿ, ಸಂಘದಲ್ಲಿ 565 ಸದಸ್ಯರಿಂದ ರೂ.16,94,500 ಪಾಲು ಬಂಡವಾಳ, ರೂ.62,84,567 ಠೇವಣಾತಿಗಳು ಹೊಂದಿದೆ. ರೂ.7,67,435.36 ಸಂಘದ ಉಳಿಕೆ ಠೇವಣಾತಿಯಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪುತ್ತೂರು ಶಾಖೆಯಲ್ಲಿ ರೂ.8,413,000 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖೆಯಲ್ಲಿ ರೂ.7,59,022.36ನ್ನು ಉಳಿತಾಯ ಖಾತೆಯಲ್ಲಿ ವಿನಿಯೋಗಿಸಲಾಗಿದೆ. ವರದಿ ಸಾಲಿನಲ್ಲಿ ರೂ.75ಲಕ್ಷ ಸಾಲ ವಿತರಿಸಲಾಗಿದೆ ಎಂದು ಹೇಳಿದರು.



ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಸಹಕಾರಿ ಸಂಘವು ಪ್ರಾರಂಭಗೊAಡು ಒಂದು ವರ್ಷ ಪೂರೈಸಿದೆ. ಸಂಘವು ಹಂತ ಹಂತವಾಗಿ ಮುಂದುವರಿಯುತ್ತಾ ಸಾಗಲಿ. ಕಳೆದ ಒಂದು ವರ್ಷದ ವ್ಯವಹಾರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆೆ. ಮುಂದಿನ ದಿನಗಳಲ್ಲಿ ಚಿನ್ನಾಭರಣ ಸಾಲ, ವಾಹನ ಸಾಲ ನೀಡುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
ಸಂಘದ ನಿರ್ದೇಶಕರಾದ ಹರಿಪ್ರಕಾಶ್ ಬೈಲಾಡಿ, ಸಂದೀಪ್, ಎಫ್‌ಜಿಎಂ ಗೌಡ, ತನುಜಾ ಎಂ.ಕೆ., ಕವಿತಾ ಕೆ., ಚಂದ್ರಶೇಖರ ನಾಯ್ಕ್, ಕೃಷ್ಣ ಬಿ., ಸುಧೀರ್ ಪಿ., ಗಣೇಶ್ ಎಂ.ಕೆ., ಹರಿಣಾಕ್ಷಿ ಬಿ. ಹಾಗೂ ಧರ್ಣಪ್ಪ ಗೌಡ ಕೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐ.ರಾಮಚಂದ್ರ ಭಟ್ ವರದಿ ಹಾಗೂ ಲೆಕ್ಕಪತ್ರಮಂಡಿಸಿದರು. ಸಿಬ್ಬಂದಿ ನವ್ಯ ಆಯ-ವ್ಯಯ ಮಂಡಿಸಿದರು. ಕೆಯ್ಯೂರು ಕೆಪಿಎಸ್ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ವಂದಿಸಿದರು. ಸುನೀತಾ ಪ್ರಾರ್ಥಿಸಿದರು.
ಸರಕಾರಿ ನೌಕರರ ಸಂಘವು ಅಂಬೆಗಾಲಿಡುತ್ತಾ ಸಾಗುತ್ತಿದೆ. ಆದರೂ ನಿರೀಕ್ಷೆಗಿಂತ ಮೀರಿದ ವ್ಯವಹಾರವಾಗಿದೆ. ಆರಂಭಿಕ ಹಂತದಲ್ಲಿರುವ ಸಂಘವು ಯಾವುದೇ ರೀತಿಯಲ್ಲಿ ಆತುರ ಪಡೆದ ಮುಂದುವರಿಯುತ್ತಿದೆ. ಕಡಬದಲ್ಲಿ ಸಂಘದ ಶಾಖೆ ತೆರೆಯುವಂತೆ ಬೇಡಿಕೆಗಳು ಬಂದಿದ್ದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ಹಾಕಿಕೊಳ್ಳಲಾಗುವುದು
-ಅಬ್ರಹಾಂ ಎಸ್.ಎ. ಅಧ್ಯಕ್ಷರು










