







ಅಧ್ಯಕ್ಷ:ಅಜೀಜ್ ಕ್ಯಾಂಪ್ಕೋ, ಪ್ರ.ಕಾರ್ಯದರ್ಶಿ: ಶಮೀರ್ ಟಿ.ಎಂ


ಕೆಯ್ಯೂರು: SKSSF ಮಾಡಾವು ಶಾಖೆಯ ಮಹಾ ಸಭೆ ಜಮಾಅತ್ ಅಧ್ಯಕ್ಷರಾದ ಪುತ್ತುಂಜಿ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬ್ ಉಸ್ತಾದರಾದ ಹರ್ಷದ್ ಬಾಖವಿ ದುವಾಕ್ಕೆ ಚಾಲನೆ ನೀಡಿದರು. ಹಾಜಿ ಹನೀಫ್ ಮುಸ್ಲಿಯಾರ್ ಸ್ವಾಗತಿಸಿದರು.ಸಿರಾಜ್ ಎ.ಕೆ ವರದಿ ಮತ್ತು ಲೆಕ್ಕ ಮಂಡಿಸಿದರು.



ನೂತನ ಅಧ್ಯಕ್ಷರಾಗಿ ಅಜೀಜ್ ಕ್ಯಾಂಪ್ಕೋ, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಟಿ.ಎಂ, ಕೋಶಾಧಿಕಾರಿಯಾಗಿ ಸುಹೈಲ್ ಪಾತುಂಜ, ಸಂಘಟನಾ ಕಾರ್ಯದರ್ಶಿಯಾಗಿ ತಾಜುದ್ದೀನ್ ದಟ್ಟ ಆಯ್ಕೆಯಾಗಿದ್ದಾರೆ. ಮಾಡಾವು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯಾಸಿರ್ ಅರಫತ್ ಕೌಸರಿ ಹಾಗೂ ಮನ್ಸೂರ್ ಅಸ್ಲಮಿ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ನಿಜಾಮ್ ಹೋನೆಸ್ಟ್ , ಹನೀಫ್ ದಟ್ಟ, ಆಸಿಫ್ ಎಂ ಎಚ್, ಜೊತೆ ಕಾರ್ಯದರ್ಶಿಯಾಗಿ ಎ.ಕೆ ಸಿರಾಜ್, ಶಮ್ಮಾಸ್, ಹಾಶಿಮ್ ಬಿಕೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ದಟ್ಟ, ಅಯೂಬ್ ಎಂ.ಇ, ನಾಸೀರ್ ಹೋನೆಸ್ಟ್, ನಾಸೀರ್ ಟಿ.ಎಂ, ಆಸೀಫ್ ಎಂ ಕೆ ಆಯ್ಕೆಯಾದರು. ವಿಖಾಯ ಕಾರ್ಯದರ್ಶಿಯಾಗಿ ಫತ್ತಾಹ್ ಹೋನೆಸ್ಟ್, ಟ್ರೆಂಡ್ ಕಾರ್ಯದರ್ಶಿಯಾಗಿ ಹಾಜಿ ಹನೀಫ್ ಮುಸ್ಲಿಯಾರ್, ಇಬಾದ್ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್, ಸರ್ಘಾಲಯ ಕಾರ್ಯದರ್ಶಿಯಾಗಿ ಹಾಶಿಂ ಬಿಕೆ, ತ್ವಲಾಬಾ ಕಾರ್ಯದರ್ಶಿಯಾಗಿ ಹಮೀದ್ ದಾರಿಮಿ , ಮಿಡಿಯಾ ಕಾರ್ಯದರ್ಶಿಯಾಗಿ ಶಮ್ಮಾಸ್, ಕ್ಯಾಂಪಸ್ ವಿಂಗ್ ಫೈಜಲ್ ಎಂ ಎ, ಐಎಫ್ಸಿ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಯ್ಯನಕಟ್ಟೆ ಆಯ್ಕೆಯಾದರು.










