ಶಿವಳ್ಳಿ ಸಂಪದ ಪುತ್ತೂರು ವತಿಯಿಂದ ಶಿಕ್ಷಕರ ದಿನಾಚರಣೆ, ಸನ್ಮಾನ

0

ಪುತ್ತೂರು: ಶಿವಳ್ಳಿ ಸಂಪದ ಪುತ್ತೂರು ವತಿಯಿಂದ ಶಿಕ್ಷಕರ ದಿನಾಚರಣೆ, ಸನ್ಮಾನ ಕಾರ್ಯಕ್ರಮ ಬೊಳುವಾರಿನಲ್ಲಿರುವ ನವನೀತ ಸಭಾಂಗಣದಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸುದಾನ ಶಾಲಾ ಶಿಕ್ಷಕಿ ಕವಿತಾ ಅಡೂರು ಗುರು ಶಿಷ್ಯರ ಸಂಬಂಧ ಮತ್ತು ಶಿಕ್ಷಕರ ಪಾತ್ರ ಸಮಾಜದಲ್ಲಿ ಎಂಬುದರ ಬಗ್ಗೆ ಉಪನ್ಯಾಸ ನೀಡಿದರು.



ನಿವೃತ್ತ ಶಿಕ್ಷಕಿ ಲೀಲಾ ಕುಂಜತ್ತಾಯರಿಗೆ ಸನ್ಮಾನ ಮಾಡಲಾಯಿತು. ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸತೀಶ್ ಕೆ.ಎಸ್. ಸಂಧರ್ಭೋಚಿತವಾಗಿ ಮಾತಾಡಿದರು. ಸಂಘಟನಾ ಕಾರ್ಯದರ್ಶಿ ರವೀಂದ್ರ ಮಾಸ್ಟರ್ ಶುಭ ಹಾರೈಸಿದರು. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಇದನ್ನು ಗೌರವಾಧ್ಯಕ್ಷರಾದ ವತ್ಸಲರಾಜ್ಞಿ ನಡೆಸಿಕೊಟ್ಟರು. ಶಿಕ್ಷಕ ವೃತ್ತಿಯಲ್ಲಿರುವ ಸುರೇಖಾ, ಲತಾ, ರೇಷ್ಮಾ, ಪೂರ್ಣಿಮಾ , ವೀಣಾ ಸರಸ್ವತಿ ಅವರನ್ನು ಗೌರವಿಸಲಾಯಿತು .

ಅಮಿತಾ ಕಲ್ಲುರಾಯ ಪಾಣಾಜೆ ವಲಯ, ಪೂರ್ಣಿಮಾ ಚಿದಾನಂದ ಬೆಳಂದೂರು ವಲಯ, ಅನ್ನಪೂರ್ಣ ಸೇವಿರೆ ಬೊಳುವಾರು ವಲಯ, ರಮಾದೇವಿ ದರ್ಬೆ ವಲಯ ಅಧ್ಯಕ್ಷರುಗಳು ಹಾಗೂ ತಾಲೂಕು ಮಹಿಳಾ ನಿರ್ದೇಶಕರಾದ ಅನುಪಮಾ, ಇಂದಿರಾ ಬಿ.ಕೆ. ಉಪಸ್ಥಿತರಿದ್ದರು ಮಹಾದೇವಿ ಧನ್ಯವಾದ ಸಲ್ಲಿಸಿದರು, ವೀಣಾ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here