ಜೂಡೋ ಪಂದ್ಯಾಟ : ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಾನಿಧ್ಯ ಎ. ರಾಜ್ಯಮಟ್ಟಕ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಮತ್ತು ಪಿಎಂಶ್ರೀ ಕೆಪಿಎಸ್ ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 14ರ ವಯೋಮಾನದ ಬಾಲಕಿಯರ ಜಿಲ್ಲಾಮಟ್ಟದ ಜೂಡೋ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 8ನೇ ತರಗತಿಯ ಸಾನಿಧ್ಯ ಎ. (ಅನಂತ ಕೃಷ್ಣ ಮತ್ತು ಮೋಹಿನಿ ಎಂ. ದಂಪತಿ ಪುತ್ರಿ) ಪ್ರಥಮ ಸ್ಥಾನ ಪಡೆದು ಬಾಗಲಕೋಟೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಜೂಡೋ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ದೀಕ್ಷಾ ಪಿ. ಎನ್, ಹಾಗೂ ಜೂಡೋ ತರಬೇತಿದಾರರಾದ ಮಾಧವ ಅಳಿಕೆ, ರೋಹಿತ್ SN, ನಿಖಿಲ್ KT, ತನುಶ್ರೀ ಡಿ, ಸುದೀನ್ ಆಚಾರ್, ಭವಿಷ್ ಸಿಂಹಮೂಲೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here