ಸರಕಾರಿ ಶಿಕ್ಷಕರಾಗುವ ಕನಸಿಗೆ ಮತ್ತೊಂದು ಅವಕಾಶ…

0

GPSTR • PSTR • HSTR ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ಅಕ್ಟೋಬರ್ 26ರ ವರೆಗೆ ವಿಸ್ತರಣೆ…
ವಿದ್ಯಾಮಾತಾದಿಂದ ಅಂತಿಮ ಹಂತದ ಆನ್‌ಲೈನ್ ಕ್ರ್ಯಾಶ್ ಕೋರ್ಸ್…

ಪುತ್ತೂರು : ಸರಕಾರಿ ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಮಹತ್ವದ ಅವಕಾಶವಾಗಿದೆ. GPSTR, PSTR ಹಾಗೂ HSTR ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಅಂತಿಮ ಹಂತದ ವಿಶೇಷ ಆನ್‌ಲೈನ್ ಕ್ರ್ಯಾಶ್ ಕೋರ್ಸ್ ಅನ್ನು ಆರಂಭಿಸಿದೆ.
ಕಳೆದ ಹಲವು ವರ್ಷಗಳಿಂದ ಯುವಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಸರಕಾರಿ ಹಾಗೂ ಸರಕಾರಿ ಸ್ವಾಮ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಮುನ್ನಡೆಯುತ್ತಿರುವ ವಿದ್ಯಾಮಾತಾ ಅಕಾಡೆಮಿ, ಇದೀಗ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳ ಅಂತಿಮ ಹಂತದ ಸಿದ್ಧತೆಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ 800ಕ್ಕೂ ಅಧಿಕ ಸಾಧನೆ….!
ವಿದ್ಯಾಮಾತಾ ಅಕಾಡೆಮಿ ಸರಕಾರಿ ನೇಮಕಾತಿ ಪರೀಕ್ಷೆಗಳ ಜೊತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗೂ ನಿರಂತರವಾಗಿ ತರಬೇತಿ ನೀಡುತ್ತಿದೆ.
ಈವರೆಗೆ ಅಕಾಡೆಮಿಯ ತರಬೇತಿಯ ಮೂಲಕ 800ಕ್ಕೂ ಅಧಿಕ ಅಭ್ಯರ್ಥಿಗಳು ವಿವಿಧ ಶಿಕ್ಷಕರ ಅರ್ಹತಾ ಪರೀಕ್ಷೆಗಳಾದ:
KARTET – ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ,
KSET – ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ ,
CTET – ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ಹಾಗೂ
NET – ರಾಷ್ಟ್ರೀಯ ಅರ್ಹತಾ ಪರೀಕ್ಷೆ
ಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ತಿಳಿಸಿದ್ದಾರೆ.

ಅಲ್ಲದೇ , ಕಳೆದ ಸಾಲಿನ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ನೀಡಿದ ತರಬೇತಿಯ ಮೂಲಕ 5 ವಿದ್ಯಾರ್ಥಿಗಳು GPSTR ನೇಮಕಾತಿಯಲ್ಲಿ ಉತ್ತೀರ್ಣರಾಗಿರುವುದು ಅಕಾಡೆಮಿಯ ತರಬೇತಿ ಪ್ರಯತ್ನಗಳಿಗೆ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್ 26ರ ವರೆಗೆ ಅವಕಾಶ….
GPSTR / PSTR / HSTR ನೇಮಕಾತಿಗೆ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಅ. 26 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಶಿಕ್ಷಕರಾಗುವ ಗುರಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಸಮರ್ಪಕವಾಗಿ ಸಿದ್ಧತೆ ನಡೆಸಬಹುದು.

ಅಂತಿಮ ಹಂತದ ತರಬೇತಿಯಲ್ಲಿ ಏನೆಲ್ಲಾ ಇದೆ…?
ವಿದ್ಯಾಮಾತಾ ಅಕಾಡೆಮಿ ಆಯೋಜಿಸಿರುವ ವಿಶೇಷ ಕ್ರ್ಯಾಶ್ ಕೋರ್ಸ್‌ನಲ್ಲಿ…:
1.ಲೈವ್ ಆನ್‌ಲೈನ್ ತರಗತಿಗಳು.
2.ಪ್ರತಿದಿನ ರಾತ್ರಿ 7ರಿಂದ 10ರವರೆಗೆ ತರಬೇತಿ.
3.ಪ್ರತಿದಿನ ಮಾದರಿ ಪ್ರಶ್ನೆಪತ್ರಿಕೆಗಳ ಪರೀಕ್ಷೆ.
4.ಅಧ್ಯಯನ ಸಾಮಗ್ರಿಗಳು (Study Materials).

    1. ಪರೀಕ್ಷಾ ಸಿದ್ಧತೆಗೆ ನಿರಂತರ ಮಾರ್ಗದರ್ಶನ,ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸಲಾಗುತ್ತದೆ.

    ಕೊನೆಯ ಹಂತದ ಸಿದ್ಧತೆ – ಗುರಿ ಸರ್ಕಾರಿ ಶಿಕ್ಷಕರ ಹುದ್ದೆ..!
    ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಅಂತಿಮ ಹಂತದಲ್ಲಿ ತಮ್ಮ ತಯಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿಕೊಳ್ಳಲು ಈ ಆನ್‌ಲೈನ್ ಕ್ರ್ಯಾಶ್ ಕೋರ್ಸ್‌ನ ಸದುಪಯೋಗಪಡಿಸಿಕೊಳ್ಳಬಹುದೆಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದ್ದು , ದಾಖಲಾತಿಗಾಗಿ ಅಕಾಡೆಮಿ ಕಛೇರಿಯನ್ನು ಇಲ್ಲವೇ ದೂರವಾಣಿ ಸಂಖ್ಯೆ
    9620468869 ಅಥವಾ 9945182516 ಸಂಪರ್ಕಿಸುವಂತೆ ಕೋರಲಾಗಿದೆ.

    .

    LEAVE A REPLY

    Please enter your comment!
    Please enter your name here