







ನಿಡ್ಪಳ್ಳಿ: ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಜಯನಗರ ಮುಖ್ಯ ರಸ್ತೆ ಬದಿ ಅಳವಡಿಸಿರುವ ವಿದ್ಯುತ್ ಕಂಬದ ಬೀದಿ ದೀಪ ಹಗಲಿನಲ್ಲಿಯೂ ಉರಿಯುತ್ತಿರುವುದು ಕಂಡು ಬಂದಿದೆ.


ವಿದ್ಯುತ್ ಬಿಲ್ಲ್ ಕಟ್ಟಲಾಗದ ಪರಿಸ್ಥಿತಿಯಲ್ಲಿ ಪಂಚಾಯತ್ ಇರುವಾಗ ಈ ರೀತಿಯಲ್ಲಿ ಪೋಲಾಗುತ್ತಿರುವ ವಿದ್ಯುತ್ತನ್ನು ನಿಯಂತ್ರಿಸಲಾಗದಿದ್ದರೆ ಕೇಳುವವರು ಹೇಳುವವರು ಯಾರು ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.













