ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಉದನೆಯ ಡಾ| ಮಾಣಿ ವೆಳುತ್ತೇಡತ್ತುಪರಂಬಿಲ್ ನಿಧನ

0

ನೆಲ್ಯಾಡಿ: ಮೂಲತ: ಉದನೆ ಸಮೀಪದ ನೇಲ್ಯಡ್ಕ ನಿವಾಸಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ.ಡಾ| ಮಾಣಿ ವೆಳುತ್ತೇಡತ್ತುಪರಂಬಿಲ್(64ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ.1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ವಂ.ಡಾ| ಮಾಣಿ ವೆಳುತ್ತೇಡತ್ತುಪರಂಬಿಲ್ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಫಾದರ್ ಮುಲ್ಲಾರ‍್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅ.1ರಂದು ನಿಧನರಾಗಿದ್ದಾರೆ.

ಮೂಲತ: ಉದನೆ ಸಮೀಪದ ನೇಲ್ಯಡ್ಕ ದಿ| ಮಾಣಿ ಮತ್ತು ತ್ರೇಸ್ಯಮ್ಮ ದಂಪತಿ ಪುತ್ರರಾದ ವಂ.ಡಾ| ಮಾಣಿ ವೆಳುತ್ತೇಡತ್ತುಪರಂಬಿಲ್ ಅವರು ಧರ್ಮಗುರುಗಳಾಗಿ ಬೆದೂರು, ಚೆಂಪನೋಡ, ಮುದೂರು, ಬಂಗಾಡಿ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ (ಕೊಡಗು), ಜಡ್ಕಲ್, ಕಂಕನಾಡಿ ಸೇರಿದಂತೆ ಹಲವು ಧರ್ಮಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿ ಧರ್ಮಪ್ರಾಂತ್ಯದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಧರ್ಮಸಭೆಯ ಅಭಿವೃದ್ಧಿ ಹಾಗೂ ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.


ಡಾ| ಮಾಣಿ ವೆಳುತ್ತೇಡತ್ತುಪರಂಬಿಲ್ ಅವರು ನೇಲ್ಯಡ್ಕ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದುಕೊಂಡಿದ್ದರು. ಬಳಿಕ ತಲಶ್ಶೇರಿಯ ಸೈಂಟ್ ಜೋಸೆಫ್ ಮೈನರ್ ಸೆಮಿನರಿ ಹಾಗೂ ಕೋಟಯಂ ವಡವಾದೂರಿನ ಸೈಂಟ್ ಥಾಮಸ್ ಅಪೋಸ್ತೋಲಿಕ್ ಸೆಮಿನರಿಯಲ್ಲಿ ಧರ್ಮಗುರು ತರಬೇತಿ ಪಡೆದುಕೊಂಡಿದ್ದರು. ಮೈಸೂರಿನ ಕೆ.ಎಸ್.ಒ.ಯು ಹಾಗೂ ರೋಮ್‌ನ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ದಿ ಹೋಲಿ ಕ್ರಾಸ್‌ನಲ್ಲಿ ಅಧ್ಯಯನ ನಡೆಸಿದ್ದರು. 2006ರಲ್ಲಿ ಇವರು ರೋಮ್‌ನಿಂದ ಡಾಕ್ಟರೇಟ್ ಪದವಿ ಪಡೆದಿದ್ದರು.

LEAVE A REPLY

Please enter your comment!
Please enter your name here