ಜೇಸಿಐ ಭಾರತದ ವಲಯ 15ರ ತರಬೇತಿ ಸಮ್ಮೇಳನ-ಆರೋಹಣ

0

ಜೇಸಿಐ ಆಲಂಕಾರು ಘಟಕಕ್ಕೆ ಹಲವಾರು ಪ್ರಶಸ್ತಿ ಮನ್ನಣೆ, ಹೇಮಲತಾ ಪ್ರದೀಪ್‌ರವರಿಗೆ ಪ್ರೇರಣಾ ಪುರಸ್ಕಾರ

ಆಲಂಕಾರು: ಜೇಸಿಐ ಭಾರತದ ವಲಯ 15ರ ತರಬೇತಿ ಸಮ್ಮೇಳನವು ಜೇಸಿಐ ಮಂಗಳೂರು ಘಟಕದ ಆತಿಥ್ಯದಲ್ಲಿ ಮಂಗಳೂರಿನ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆಯಿತು.
ತರಬೇತಿ ವಿಭಾಗದಲ್ಲಿ ಜೇಸಿಐ ಆಲಂಕಾರು ಘಟಕದಿಂದ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಾದ ಎಂಪವರಿಂಗ್ ಯೂತ್, ಯುವಶಕ್ತಿ ಅಭಿಯಾನ, ಜೇಸಿಐ ಯಾಕ್ಷನ್ ಫ್ರೇಮ್ ವರ್ಕ್, ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ನಡೆಸಲಾದ ದೀಪೋತ್ಥಾನ ಸರಣಿ ತರಬೇತಿ ಕಾರ್ಯಕ್ರಮ ಹಾಗೂ ತರಬೇತಿ ಸಪ್ತಾಹದ ಪ್ರಯುಕ್ತ ಘಟಕದಲ್ಲಿ ನಡೆಸಲಾದ ತರಬೇತಿ ಕಾರ್ಯಕ್ರಮಗಳಿಗೆ ವಿವಿಧ ಮನ್ನಣೆಗಳು ದೊರೆತಿವೆ.

ಪ್ರೇರಣಾ ಪುರಸ್ಕಾರ:
ತರಬೇತುದಾರರಿಗೆ ಕೊಡಲ್ಪಡುವ ಪ್ರೇರಣಾ ಪುರಸ್ಕಾರವನ್ನು, ಹಲವಾರು ಯಶಸ್ವಿ ತರಬೇತಿಯನ್ನು ನಡೆಸಿಕೊಟ್ಟಿರುವ ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷೆ, ವಲಯ ತರಬೇತುದಾರೆ ಹೇಮಲತಾ ಪ್ರದೀಪ್ ಪಡೆದುಕೊಂಡರು.

ಅದ್ವಿಕಾ ಬಾಕಿಲರಿಗೆ ಸನ್ಮಾನ:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹೆಸರಾಂತ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡಿ ಕರುನಾಡಿನ ಮನೆ ಮಾತಾಗಿರುವ ಜೂನಿಯರ್ ಜೇಸಿ ಅದ್ವಿಕಾ ಬಾಕಿಲ ಇವರಿಗೆ ವಲಯದಿಂದ ಸನ್ಮಾನ ಮಾಡಿ ಅಭಿನಂದಿಸಲಾಯಿತು.

ಎಫೆಕ್ಟೀವ್ ಪಬ್ಲಿಕ್ ಸ್ಪೀಕಿಂಗ್ ರನ್ನರ್ ಅಪ್ ಅವಾರ್ಡ್
ತರಬೇತಿ ಸಮ್ಮೇಳನದ ಅಂಗವಾಗಿ ಜೇಸಿ ಸದಸ್ಯರಿಗೆ ನಡೆಸಲಾದ ಪರಿಣಾಮಕಾರಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್, ವಿವಿಧ ಘಟಕಗಳಿಂದ ಆಗಮಿಸಿದ್ದ ವಲಯ ಹಾಗೂ ರಾಷ್ಟ್ರೀಯ ತರಬೇತುದಾರರು ಉಪಸ್ಥಿತರಿದ್ದರು.



ಜೇಸಿಐ ಆಲಂಕಾರು ಘಟಕದಿಂದ ಘಟಕಾಧ್ಯಾಕ್ಷ ಮಹೇಶ್ ಪಾಟಾಳಿ, ಸ್ಥಾಪಕ ಪ್ರಶಾಂತ್ ಕುಮಾರ್ ರೈ,ಪೂರ್ವಾಧ್ಯಕ್ಷೆ ಹೇಮಲತಾ ಪ್ರದೀಪ್, ನಿಯೋಜಿತ ಅಧ್ಯಕ್ಷೆ ಶ್ರುತಿ ಪ್ರಸಾದ್ ರೈ ಹಾಗೂ ಜೆಜೇಸಿ ಅದ್ವಿಕಾ ಬಾಕಿಲ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here