ಅ.2ರಿಂದ 4 : ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಕುರಿತು ಪ್ರಥಮ ‘ಮಂಗಳೂರು ಜಾಯಿಂಟ್ ಕಾನ್ಕ್ಲೇವ್’

0

ಮಂಗಳೂರು: ಕೆನರಾ ಆರ್ಥೋಪೆಡಿಕ್ ಸೊಸೈಟಿ, ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ (KOA) ಹಾಗೂ IAA ಸಹಯೋಗದಲ್ಲಿ ಪ್ರಥಮ ಆವೃತ್ತಿಯ ‘ಮಂಗಳೂರು ಜಾಯಿಂಟ್ ಕಾನ್ಕ್ಲೇವ್’ ಅ.2ರಿಂದ 4ರವರೆಗೆ ಮಂಗಳೂರಿನ ಯರ್ಮಾಳ್‌ನ ಹೋಟೆಲ್ ಪೆನಿನ್ಸುಲಾ ಡೆಲ್ಮಾರ್‌ನಲ್ಲಿ ನಡೆಯಲಿದೆ.

ಮೂರು ದಿನಗಳ ಈ ಸಮ್ಮೇಳನವು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಹಾಗೂ ಕೀಲು ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುತ್ತಿರುವ ನೂತನ ತಂತ್ರಜ್ಞಾನಗಳ ಕುರಿತು ಕೇಂದ್ರೀಕೃತವಾಗಿರಲಿದೆ. ಭಾರತ ಹಾಗೂ ವಿದೇಶಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು, ಖ್ಯಾತ ಮೂಳೆ ತಜ್ಞರು, ಕೀಲು ಬದಲಿ ಶಸ್ತ್ರಚಿಕಿತ್ಸಾ ತಜ್ಞರು ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಾ ಪರಿಣತರು ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ 11 ಲೈವ್ ಹಾಗೂ ರಿಲೈವ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳು ನಡೆಯಲಿವೆ. ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳ ಜೊತೆಗೆ ವಿವಿಧ ರೋಬೋಟಿಕ್ ತಂತ್ರಜ್ಞಾನಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡುವ ವಿಧಾನಗಳನ್ನು ಪ್ರದರ್ಶಿಸಲಾಗುವುದು.

ವೈಜ್ಞಾನಿಕ ಕಾರ್ಯಕ್ರಮದಲ್ಲಿ ತಜ್ಞರ ಉಪನ್ಯಾಸಗಳು, ಪ್ಯಾನೆಲ್ ಚರ್ಚೆಗಳು, ಶಸ್ತ್ರಚಿಕಿತ್ಸಾ ಪ್ರಾತ್ಯಕ್ಷಿಕೆಗಳು ಹಾಗೂ ಸಂವಾದಾತ್ಮಕ ಅಧಿವೇಶನಗಳು ನಡೆಯಲಿವೆ.

ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಅಧ್ಯಕ್ಷ ಡಾ. ದೀಪಕ್ ರೈ, ಸಂಘಟನಾ ಕಾರ್ಯದರ್ಶಿ ಡಾ. ಅಭಿಷೇಕ್ ಶೆಟ್ಟಿ, ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ವಿಕ್ರಮ್ ಶೆಟ್ಟಿ ಹಾಗೂ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಿ. ಸಚ್ಚಿದಾನಂದ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here