ಬೆಟ್ಟಂಪಾಡಿ ಹಿ ಪ್ರಾ ಶಾಲೆಯಲ್ಲಿ ಗಾಂಧೀಜಿಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

0

ಪುತ್ತೂರು : ಬೆಟ್ಟoಪಾಡಿ ಹಿ.ಪ್ರಾ. ಶಾಲೆಯಲ್ಲಿ ಗಾಂಧೀಜಿಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು.

ವಿದ್ಯಾರ್ಥಿಗಳು ದಿನದ ಮಹತ್ವ ಹಾಗೂ ಘೋಷ ವಾಕ್ಯಗಳನ್ನು ಹೇಳಿದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶರೀಫ್ ಎನ್, ಉಪಾಧ್ಯಕ್ಷೆ ಸೌಮ್ಯಶ್ರಿ ವಿ, ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಯವರು, ಪೂರ್ವ ಪ್ರಾರ್ಥಮಿಕ ವಿಭಾಗದ ಸಹಾಯಕಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮಮತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿ ಶಿಕ್ಷಕಿಯಾದ ರಮ್ಯಾ ಸ್ವಾಗತಿಸಿ ಗೌರವ ಶಿಕ್ಷಕಿಯಾದ ಭಾರತಿ ವಂದಿಸಿದರು. ಅತಿಥಿ ಶಿಕ್ಷಕಿ ಮಮತಾ ಕೆಎನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here