







ಪುತ್ತೂರು: ಬಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಗಾಗಿ ನಡೆದ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಪ್ರಾಥಮಿಕ ವಿಭಾಗದ 6 ರಿಂದ 13 ವರ್ಷದ ಮಕ್ಕಳಿಗೆ ನಡೆದ “ವಿಕಸಿತ ಭಾರತ-2047 ನನ್ನ ಕನಸಿನ ಭಾರತ” ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಪರೀಕ್ಷಿತ್ ಎಸ್.ಪಿ. (ಸುಧಾಕರ ಪಾರ ಮತ್ತು ವಾಣಿ ಕೆ. ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದು ಮಂಗಳೂರು ಸಂಘನಿಕೇತನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.












