







ಪುತ್ತೂರು : ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಭಗವತಿ ಸರ್ವೀಸಸ್‌ನ ಮಾಲಕ ಹಾಗೂ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿ ಪುತ್ತೂರು ಶಾಖೆಯ ಅಡ್ವೈಸರ್ ಆಗಿರುವ ನಾರಾಯಣ ಕುಕ್ಕುಪುಣಿ ಅವರಿಗೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪೆನಿಯು ರಾಷ್ಟ್ರಮಟ್ಟದಲ್ಲಿ 5 ನೇ ಸ್ಥಾನ ನೀಡಿ ಗೌರವಿಸಿದೆ.


ಜುಲೈ 2026-27 ರ ಮಾರ್ಕೆಟಿಂಗ್ ಕ್ಯಾಲೆಂಡರ್ ರೆಕಗ್ನಿಷನ್ ಇನಿಶಿಯೇಟಿವ್ ಫ್ರೆಶ್ ರಿಟೈಲ್ ಪಾಲಿಸಿ ವಿಭಾಗದಲ್ಲಿ ಅವರು ತೋರಿಸಿದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮೂಲಕ ಅವರು ಆಲ್-ಇಂಡಿಯಾ ಮಟ್ಟದಲ್ಲಿ 5ನೇ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸ್ಟಾರ್ ರಿವಾರ್ಡ್ಸ್ -2025-26 ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಪ್ರಧಾನ ಮಾಡಲಾಯಿತು.



ಮಂಗಳೂರು ವಲಯ ರೀಜನಲ್ ಮ್ಯಾನೇಜರ್ ನಾಗರಾಜ್, ಮಾರ್ಕೆಟಿಂಗ್ ವಿಭಾಗದ ರೀಜನಲ್ ಮ್ಯಾನೇಜರ್ ಶ್ರೀಮತಿ, ರೀಜನಲ್ ಮ್ಯಾನೇಜರ್ (ಓಡಿ.ಟಿಪಿ)ರಾಧಿಕಾ, ಹಿರಿಯ ಡಿವಿಜನಲ್ ಮ್ಯಾನೇಜರ್ ರತ್ನಾವತಿ, ಪುತ್ತೂರು ಶಾಖೆಯ ಸೀನಿಯರ್ ಬ್ರ್ಯಾಂಚ್ ಮ್ಯಾನೇಜರ್ ವೀರ್ ಅಭಿಮನ್ಯು ಸೂಡ್, ಪುತ್ತೂರು ಯುನಿಟ್ ಮ್ಯಾನೇಜರ್ ಸುಧೀಶ್‌ರವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುತ್ತೂರು ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರರಾಗಿರುವ ನಾರಾಯಣ ಕುಕ್ಕುಪುಣಿಯವರು ಒಳಮೊಗ್ರು ಗ್ರಾಮದ ನಿವಾಸಿಯಾಗಿದ್ದು ಕುಂಬ್ರದಲ್ಲಿ ಶ್ರೀ ಭಗವತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಸೂರೆನ್ಸ್, ಆರೋಗ್ಯ ವಿಮಾ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಕುಂಬ್ರ ಶ್ರೀ ಭಗವತಿ ಸರ್ವೀಸಸ್‌ನ ವ್ಯವಸ್ಥಾಪಕಿಯಾಗಿರುವ ಅಜಿತಾ ನಾರಾಯಣ, ಪುತ್ರ ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಅನೀಶ್ ಕೆ.ಎನ್, ಪುತ್ರಿ ನಿಟ್ಟೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅವ್ಯಾ ಕೆ.ಎನ್‌ರವರೊಂದಿಗೆ ಕೊಲತ್ತಡ್ಕ ಶ್ರೀ ಭಗವತಿ ನಿವಾಸಿದಲ್ಲಿ ವಾಸ್ತವ್ಯ ಹೊಂದಿದ್ದಾರೆ.










