







ಅಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್, ಪ್ರ.ಕಾರ್ಯದರ್ಶಿಯಾಗಿ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ


ಪುತ್ತೂರು: ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯದ 2026-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ ಆಯ್ಕೆಯಾಗಿದ್ದಾರೆ.



ಉಪಾಧ್ಯಕ್ಷರಾಗಿ ಮುಹಮ್ಮದ್ ಕೆ.ಎಚ್ ಕುಕ್ಕಾಜೆ, ರಫೀಕ್ ಫೈಝಿ ಮಾಡನ್ನೂರು, ನಾಸಿರ್ ಫೈಝಿ ಪರ್ಪುಂಜ, ಕೋಶಾಧಿಕಾರಿಯಾಗಿ ಸಲಾಂ ಹಾಜಿ ಮೇನಾಲ, ವರ್ಕಿಂಗ್ ಕಾರ್ಯದರ್ಶಿಯಾಗಿ ಯೂಸುಫ್ ಸವಾದ್ ಫೈಝಿ ಪರ್ಪುಂಜ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಗಟ್ಟಮನೆ, ನೌಫಲ್ ಅಜ್ಜಿಕ್ಕಲ್ಲು, ಸಲಾಹುದ್ದೀನ್ ಪದಡ್ಕ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಶೀರ್ ಕೌಡಿಚ್ಚಾರು, ಹನೀಫ್ ಗಟ್ಟಮನೆ, ಇಬ್ರಾಹಿಂ ಹಾಜಿ ತಿಂಗಳಾಡಿ, ಸಿರಾಜ್ ಮಾಡಾವು, ಝೈನುದ್ದೀನ್ ಹಾಜಿ, ಕರೀಂ ಪಿಲಿಪ್ಪುಡೆ, ಅಬ್ದುಲ್ ರಹ್ಮಾನ್ ಮೇನಾಲ, ಹಮೀದ್ ಹಾಜಿ, ಶರೀಫ್ ಹನೀಫಿ ಅಮ್ಚಿನಡ್ಕ, ಶಾಫಿ ಬೇರಿಕೆ, ಫತ್ತಾಹ್ ಖಾಸಿಮಿ ಆಯ್ಕೆಯಾದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಶ್ರಫ್ ಶೇಡಿಗುಂಡಿ, ಅಬ್ದುಲ್ ಜಬ್ಬಾರ್ ಅಸ್ಲಮಿ ಭಾಗವಹಿಸಿದ್ದರು.










