ಅ.10ರಿಂದ ಅ.20: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.10ರಿಂದ ಅ.20ರ ವಿಜಯದಶಮಿ ತನಕ ನವರಾತ್ರಿ ಉತ್ಸವ ನಡೆಯಲಿದೆ. ಅ 10ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ಶ್ರೀ ಆದಿಶಕ್ತಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಶರವೂರು ಇವರಿಂದ ಭಜನೆ, ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ ಸಂತರ್ಪಣೆ ನಡೆಯಲಿದೆ.

ಅ.11ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ,ರಾತ್ರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಪ್ರಸಂಗ ಶ್ರೀ ರಾಮ ದರ್ಶನನಡೆದು ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಅ.12ರಂದು ಸೋಮವಾರ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಕ್ತಿ- ಭಾವ-ಲಹರಿ ಕೃಷ್ಣ ಪ್ರಿಯ ಆಚಾರ್,ಅನಸೂಯ ಭಟ್ ಮತ್ತು ಬಳಗದವರಿಂದ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಅ.13 ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭದ್ರಕಾಳಿ ಗುಡಿಯಲ್ಲಿ ವಿಶೇಷ ಪೂಜೆ ನಂತರ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಪ್ರಸಂಗ ಕಚದೇವಯಾನಿ

ರಾತ್ರಿ ರಂಗಪೂಜೆ, ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಅ.14ರಂದು ಬುಧವಾರ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಶ್ರೀ ಕೃಷ್ಣ ಕಲಾಕೇಂದ್ರ (ರಿ) ವೀರಮಂಗಲ ವಿದ್ಯಾರ್ಥಿಗಳಿಂದ ತುಳು ನೃತ್ಯ ರೂಪಕ ಕಾರಣಿಕದ ಕಾಳಮ್ಮ
ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾದ್ಯಕ್ಷತೆ ಕೆ.ಸುಬ್ರಹ್ಮಣ್ಯ ರಾವ್ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಶರವೂರು
ಧಾರ್ಮಿಕ ಉಪನ್ಯಾಸ ಎಂ ಯಶೋಧರ ಬಂಗೇರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು ಅಳಿಕೆ,ಗೌರವ ಉಪಸ್ಥಿತಿ ಡಾ!.ಹೇಮಂತ್ ರೈ ಮನವಳಿಕೆಗುತ್ತು,ಅಧ್ಯಕ್ಷರು ಅಭಿವೃದ್ಧಿ ಸಮಿತಿ ಶ್ರೀ ಕ್ಷೇತ್ರ ಶರವೂರು ,ಮುತ್ತಪ್ಪ ಪೂಜಾರಿ ನೈಯಲ್ಗ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ ಶರವೂರು ಉಪಸ್ಥಿಯಲ್ಲಿ ಧಾರ್ಮಿಕ ಉಪನ್ಯಾಸ ನಡೆದು ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅ.15 ರಂದು ಲಲಿತಾ ಪಂಚಮಿ,ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಶಾಸ್ತ್ರೀಯ ಸಂಗೀತ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅ.16 ರಂದು ಶುಕ್ರವಾರ ಬೆಳಿಗ್ಗೆ 8:00 ರಿಂದ ಸಾಮೂಹಿಕ ಚಂಡಿಕಾಯಾಗ ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.ಸಂಜೆ ನೃತ್ಯ ಕುಸುಮಾಂಜಲಿ‌ ನೃತ್ಯ ಪ್ರಸ್ತುತಿ ನೃತ್ಯ ನಿನಾದ ಕಡಬ ಆಲಂಕಾರು ಇವರಿಂದ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.

ಅ.17 ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಯಕ್ಷಗಾನ ಪ್ರಸಂಗ ವಾಲಿಮೋಕ್ಷ ಸಂಯೋಜನೆ ಯಕ್ಷಮಿತ್ರರು ಶರವೂರು ಆಲಂಕಾರು , ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅ.18ರಂದು ದುರ್ಗಾಷ್ಟಮಿ ಬೆಳಿಗ್ಗೆ ಚಂಡಿಕಾಹೋಮ ಸೇವೆ, ಶ್ರೀ ಎಲ್. ಮನೋಹರ ಬೆಂಗಳೂರು,ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನೃತ್ಯಾರ್ಪಣೆ ನಾಟ್ಯರಾಧನ ನೃತ್ಯಾಲಯದ ವಿಧ್ಯಾರ್ಥಿಗಳಿಂದ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅ.19ರಂದು ಬೆಳಿಗ್ಗೆ ಮಹಾನವಮಿಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಭಜನೆ ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿಕೊಪ್ಪ
ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.

ಅ.20ರಂದು ವಿಜಯದಶಮಿಯಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಅಕ್ಷರಾಭ್ಯಾಸ,ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇವರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ,ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಗವದ್ಬಕ್ತರಾದ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಪ್ರವಿತ್ರಪಾಣಿ ಹರೀಶ ಆಚಾರ್ಯ ನಗ್ರಿಗುತ್ತು,ಮತ್ತು ಅರ್ಚಕ ವರ್ಗ,
, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ, ವಾಸಪ್ಪ ಗೌಡ, ಮೋಹನ ಶರವೂರು, ಪುಷ್ಪಲತಾ ಕೆ, ರೋಹಿಣಿ ಬಿ.ಎನ್ ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ, ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷರಾದ ನೋಣಯ್ಯ ಕೆದಿಲ, ಆಲಂಕಾರ ಸಮಿತಿಯ ಅಧ್ಯಕ್ಷರಾದ ಗಣರಾಜ್ ಆಲಂಕಾರು, ಸ್ವಯಂ ಸೇವಾ ಸಮಿತಿಯ ಅಧ್ಯಕ್ಷರಾದ ಚೆನ್ನಪ್ಪ ಗೌಡ ಶರವೂರು, ಉತ್ಸವ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಪ್ರಭು, ಮಾತೃಶಕ್ತಿ ಸಂಘದ ಅಧ್ಯಕ್ಷರಾದ ಸರೋಜ ಮಾಯಿಲ್ಗ ಸೇರಿದಂತೆ ಸದಸ್ಯರು ದೇವಸ್ಥಾನದ ಸಿಬ್ಬಂದಿ ವರ್ಗ, ಸೀಮೆಯ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here