







ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ 11ರಿಂದ ಅ 21ರವರೆಗೆ ನಡೆಯಲಿದೆ. ಪ್ರತಿದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆಯಲಿದೆ. ಅ. 11ರಂದು ಬೆಳಿಗ್ಗೆ ಗಣಹೋಮ, ಅ 21ರಂದು ಆಯುಧಪೂಜೆ, ವಿಜಯದಶಮಿ, ಅಕ್ಷರಾಭ್ಯಾಸ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ ತಿಳಿಸಿದ್ದಾರೆ.












