ಅ.11-19: ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಅ.11 ಉತ್ಸವಕ್ಕೆ ಚಾಲನೆ, ಅ.19 ಚಂಡಿಕಾಯಾಗ, ಬಲಿವಾಡುಕೂಟ

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.11ರಿಂದ ಅ.19ರವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಅ.19ರಂದು ವಿಶೇಷವಾಗಿ ಬೆಳಿಗ್ಗೆ ಚಂಡಿಕಾಯಾಗ ಊರ ಭಕ್ತಾದಿಗಳಿಂದ ಬಲಿವಾಡು ಕೂಟ ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ಭಜನೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಲಿರುವುದು. ಉತ್ಸವದಲ್ಲಿ ಪ್ರತಿ ದಿನ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ ನಡೆಯಲಿದೆ.


ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನದ ಅನ್ನದಾನ ಹಾಗೂ ರಂಗಪೂಜೆ ಸೇವೆ ನಡೆಯುತ್ತಿದ್ದು ಅ.11ರಂದು ಬೈಲುಗುತ್ತು ಕುಟುಂಬಸ್ಥರು ಮತ್ತು ಬಂಧುಗಳು, ಅ.12ರಂದು ಕೋಡಂದೂರು ಮನೆತನದ ಕುಟುಂಬ ಮತ್ತು ಬಂಧುಗಳು, ಅ.13ರಂದು ಪರಿಯಾಲು ದಿ.ಮೋನಪ್ಪ ರೈಯವರ ಬಗ್ಗೆ ಸೇವೆ, ಅ.14ರಂದು ಶಿವಣ್ಣ ನಾಯಕ್ ಪುಣಚ ಮತ್ತು ಕುಟುಂಬಸ್ಥರು, ಅ.15ರಂದು ದಲ್ಕಜೆ ಗುತ್ತು ಕುಟುಂಬಸ್ಥರು ಮತ್ತು ಬಂಧುಗಳು, ಅ.16ರಂದು ದೊಡ್ಡಮನೆ ಕುಟುಂಬಸ್ಥರು, ಅ.17ರಂದು ಮಣಿಲ ಶಾಸ್ತ್ರಿ ಮನೆಯವರು, ಅ.18ರಂದು ಕಂಬಳಿಮೂಲೆ ಮೀನಾಕ್ಷಿ ಅಮ್ಮ ಮತ್ತು ಮಕ್ಕಳ ಸೇವಾ ರೂಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here