







ಅ.11 ಮತ್ತು 20 ತುಲಾಭಾರ ಸೇವೆ
ಅ.17 ಹೊಸ ಅಕ್ಕಿ ನೈವೇದ್ಯ ಸಮರ್ಪಣೆ
ಅ.18 ಚಂಡಿಕಾ ಯಾಗ
ಅ.19 ಆಯುಧ ಪೂಜೆ


ಪುತ್ತೂರು: ಪುರಾತನ ಕಾರಣಿಕ ಕ್ಷೇತರ ಇಲ್ಲಿನ ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಗಳು ಅ.11ರಿಂದ ಪ್ರಾರಂಭಗೊಂಡು ಅ.20ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ.



ಅ.11ರಂದು ಬೆಳಿಗ್ಗೆ ಗಣಹೋಮ, ನಾಗ ತಂಬಿಲ, ಪಾಷಾಣಮೂರ್ತಿ ಹಾಗೂ ಗುಳಿಗ ದೈವಗಳಿಗೆ ತಂಬಿಲ ಸೇವೆಯೊಂದಿಗೆ ನವರಾತ್ರಿಯ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನಂತರ ಸುಳ್ಯಪದವು ಮಹಾಲಕ್ಷ್ಮೀ ಮಹಿಳಾ ಭಜನಾ ತಂಡವರಿಂದ ಭಜನೆ, ತುಲಾಭಾರ ಸೇವೆ, ಜಾಝ್ ಮ್ಯೂಸಿಕ್ ಬೆಳ್ಳಾರೆ ಇವರಿಂದ ಭಕ್ತಿ ಸಂಗೀತ ಸಂಭ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಶ್ರೀದೇವಿ ಯಕ್ಷ ಕಲಾ ವೃಂದ ಬಾಲವನ ಇವರಿಂದ ಮಹಿಷಾ ವಧೆ ಯಕ್ಷಗಾನ, ರಾತ್ರಿ ಭಜನೆ, ಮಹಾಪೂಜೆ ನಡೆಯಲಿದೆ.
ಅ.12ರಂದು ಅಮ್ಮ ಉಳ್ಳಾಲ್ತಿ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ ಮಹಾಪೂಜೆ ನಡೆಯಲಿದೆ. ಅ.13ರಂದು ಬೆಳಿಗ್ಗೆ ಯಕ್ಷಾಂತರಂಗ ಪೆರ್ಲ ಇವರಿಂದ ವಿಶೇಷ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ ನಡೆಯಲಿದೆ. ಅ.14ರಂದು ಸಪ್ತಸ್ವರ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಮಹಾಪೂಜೆ ನಡೆಯಲಿದೆ.
ಅ.15ರಂದು ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಅ.16ರಂದು ಬೆಳಿಗ್ಗೆ ಶ್ರೀ ಮಲರಾಯ ಭಜನಾ ತಂಡ ಕಾಲುಮಜಲು ಕೊಡುಂಗೈ ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶ್ರೀಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ, ರಾತ್ರಿ ಮಹಾಪೂಜೆ ನಡೆಯಲಿದೆ.
ಅ.17 ಹೊಸ ಅಕ್ಕಿ ನೈವೇದ್ಯ ಸಮರ್ಪಣೆ:
ನವರಾತ್ರಿ ಉತ್ಸವದಲ್ಲಿ ಅ.17ರಂದು ಬೆಳಿಗ್ಗೆ ವಿಶ್ವಹಿಂದು ಪರಿಷತ್ ಮಾತೃಶಕ್ತಿ ಪುತ್ತೂರು ಮತ್ತು ನಂತರ ವಿದ್ಯಾ ಸಾಗರ್ ಕಲಾಶಾಲೆ ಕುಕ್ಕೆ ಸುಬ್ರಹ್ಮಣ್ಯ ಇವರಿಂದ ಭಜನೆ, ಮಧ್ಯಾಹ್ನ ದೇವರಿಗೆ ಹೊಸಅಕ್ಕಿ ನೈವೇದ್ಯ ಸಮರ್ಪಣೆ, ಮಹಾಪೂಜೆ, ಸಂಜೆ ಶ್ರೀದುರ್ಗಾ ಮಹಿಳಾ ಭಜನಾ ಮಂಡಳಿ ನೀರ್ಕಜೆ ಕೇಪು ಇವರಿಂದ ಭಜನೆ, ಮಹಾಪೂಜೆ ನಡೆಯಲಿದೆ.
ಅ.18 ಚಂಡಿಕಾ ಯಾಗ
ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಅ.18ರಂದು ಚಂಡಿಕಾ ಯಾಗ ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ ನಡೆದ ಬಳಿಕ ಚಂಡಿಕಾ ಯಾಗ ಪ್ರಾರಂಭಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಚಂದ್ರಶೇಖರ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಸುಬ್ರಹ್ಮಣ್ಯ ಕಾರಂತ ಉಡುಪಿ ಇವರಿಂದ ದೇವಿ ಪಾರಾಯಣ, ಮಧ್ಯಾಹ್ನ ಚಂಡಿಕಾ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಮತ್ತು ಕಲ್ಚರ್ ಇದರ ವಿದುಷಿ ನಯನಾ ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ವಿದ್ಯಾರ್ಥಿಗಳಿಂದ ಭರತನಾಟ್ಯ, ಸಂಜೆ ಬನ್ನೂರು ಸ್ಪೂರ್ತಿ ಯುವಕ, ಯುವತಿ ಮಂಡಲದವರಿAದ ಭಜನೆ, ರಾತ್ರಿ ಮಹಾಪೂಜೆ ನಡೆಯಲಿದೆ.
ಅ.19 ಆಯುಧ ಪೂಜೆ:
ನವರಾತ್ರಿ ಉತ್ಸವದ 9ನೇ ದಿನವಾದ ಅ.19ರಂದು ಬೆಳಿಗ್ಗೆ ಒಡಿಯೂರು ವಜ್ರಮಾತ ಮಹಿಳಾ ಭಜನಾ ಮಂಡಳಿಯವರಿAದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಆಯುಧ ಪೂಜೆ, ರಾತ್ರಿ ಭಜನೆ, ಮಹಾಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದ ಕೊನೇಯ ದಿನವಾದ ಅ.20ರಂದು ಬೆಳಿಗ್ಗೆ ಗಾನಸಿರಿ ಕಲಾ ಕೇಂದ್ರದ ಕಿರಣ್ ಕುಮಾರ್ ಬಳಗದವರಿಂದ ಭಜನೆ, ಪದ್ಮನಾಭ ಅರಿಯಡ್ಕ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ. ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಭಜನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.










