ಅ.11ರಿಂದ ದೇಂತಡ್ಕ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಸಂಭ್ರಮ – ಪ್ರತಿದಿನ ಬೆಳಿಗ್ಗೆ ಚಂಡಿಕಾಹೋಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು

0

ಅ.12 ವನದುರ್ಗಾ ಹವನ
ಅ.15 ಲಲಿತಾ ಪಂಚಮಿ
ಅ.19 ದುರ್ಗಾಷ್ಠಮಿ
ಅ.20 ಮಹಾನವಮಿ, ಆಯುಧಪೂಜೆ
ಅ.21 ವಿಜಯದಶಮಿ, ವಿದ್ಯಾರಂಭ

ಪುತ್ತೂರು:ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.11ರಿಂದ ಪ್ರಾರಂಭಗೊಂಡು ಅ.21ರ ತನಕ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಿಸಲಿದೆ. ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿರುವ ನಡೆಯುವ ಉತ್ಸವದಲ್ಲಿ ಅ.11ರಂದು ನಿತ್ಯಪೂಜೆ, ಗಣಪತಿ ಹೋಮದೊಂದಿಗೆ ನವರಾತ್ರಿ ಉತ್ಸವಗಳು ಪ್ರಾರಂಭಗೊಳ್ಳಲಿದೆ. ನಂತರ ಚಂಡಿಕಾ ಹವನ, ಸರ್ವಾಲಂಕಾರ ಪೂಜೆ, ಸರ್ವಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


ಅ.12ರಂದು ವಿಶೇಷವಾಗಿ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ವನದುರ್ಗಾ ಹವನ ನಡೆಯಲಿದೆ. ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ, ಚಂಡಿಕಾಹೋಮ, ಸರ್ವಾಲಂಕಾರಪೂಜೆ, ಸರ್ವಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ನವರಾತ್ರಿ ಉತ್ಸವದಲ್ಲಿ ವಿಶೇಷವಾಗಿ ಅ.15ರಂದು ಲಲಿತಾ ಪಂಚಮಿ, ಅ.19 ದುರ್ಗಾಷ್ಠಮಿ, ಅ.20 ಮಹಾನವಮಿ, ಆಯುಧಪೂಜೆ, ವಾಹನಪೂಜೆ, ಅ.21ರಂದು ವಿಜಯದಶಮಿ, ವಿದ್ಯಾರಂಭ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು;
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಅ.11 ವಿದುಷಿ ವೀಣಾ ರಾಘವೇಂದ್ರ ಅವರ ಶಿಷ್ಯೆ ಅಂಕಿತಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅ.12ರಂದು ಶ್ರೀಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇವರಿಂದ ಭಜನೆ, ಅ.13ರಂದು ಅರವಿಂದ ಆಚಾರ್ಯ ಮಾಣಿಲ ಬಳಗದವರಿಂದ ಭಜನ್ ಸಂಧ್ಯಾ, ಅ.14ರಂದು ನೃತ್ಯೋಪಾಸನಾ ಕಲಾ ಅಕಾಡೆಮಿಯ ಪುತ್ತೂರು ಇವರಿಂದ ಶಾಲಿನಿ ಆತ್ಮಭೂಷನ್ ನಿರ್ದೇಶನದಲ್ಲಿ ‘ನೃತ್ಯೋಹಂ’, ಅ.15ರಂದು ಕಲಾನಿತೇತನ ಡ್ಯಾನ್ಸ್ ಫೌಂಡೇಷನ್ ಕಲ್ಲಡ್ಕ ಇವರಿಂದ ಭರತ ನಾಟ್ಯ ಸಿಂಚನ, ಅ.16ರಂದು ವಿವೇಕಾನಂದ ಮಹಾವಿದ್ಯಾಲಯದವರಿಂದ ಯಕ್ಷಗಾನ ತಾಳಮದ್ದಳೆ ಸುದರ್ಶನ ವಿಜಯ, ಅ.17ರಂದು ಅಮ್ನಾಯ ಗಾಳಿಮನೆ ಯಕ್ಷಸಂಸ್ಕೃತಿ ಬಳಗದವರಿಂದ ಯಕ್ಷಗಾ ತಾಳಮದ್ದಳೆ ತತ್ವದರ್ಶನ, ಅ.18ರಂದು ಚಾಮುಂಡೇಶ್ವರಿ ಯಕ್ಷಕೂಟ ಕಣಿಯೂರು ಇವರಿಂದ ತಾಳಮದ್ದಳೆ, ಅ.20ರಂದು ಶ್ರೀವನದುರ್ಗಾ ಭಕ್ತವೃಂದದವರಿಂದ ತಾಳಮದ್ದಳೆ, ಅ.20ರಂದು ನಾಟ್ಯನಿಲಯಂ ಗುರು ಕಲಾ ತಪಸ್ವಿ ಬಾಲಕೃಷ್ಣ ಮಂಜೇಶ್ವರ ತಂಡದವರಿಂದ ಶಾಸ್ತ್ರೀಯ ಹಾಗೂ ನೃತ್ಯವೈಭವ, ಅ.21ರಂದು ಚಿಪ್ಪಾಣಿ ಕಲಾ ಪ್ರತಿಷ್ಠಾನ ಹೊನ್ನಾವರ ಇವರಿಂದ ಬ್ರಹ್ಮ ಕಪಾಲ ಎಂಬ ಯಕ್ಷಗಾನ ಬಯಲಾಟದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಶ್ರೀವನದುರ್ಗಾ ಸೇವಾ ಟ್ರಸ್ಟ್ನ ಅಧ್ಯಕ್ಷ ಜೆ.ಸುಂದರ ಭಟ್ ಹಾಗೂ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಜೆ.ರಾಮಕೃಷ್ಣ ಪ್ರಸಾದ್ ಜತ್ತನಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here