







ಪುತ್ತೂರು: ಈಶ್ವರಮಂಗಲ ಮಖಾಂ ಉರೂಸ್ ಕಾರ್ಯಕ್ರಮ 2027 ಏ.2ರಿಂದ ಏ.8ರವರೆಗೆ ನಡೆಯಲಿದ್ದು, ಉರೂಸ್ ಕಾರ್ಯಕ್ರಮದ ದಿನಾಂಕ ಘೋಷಣೆ ಹಾಗೂ ಪೋಸ್ಟರ್ ಬಿಡುಗಡೆ ಅ.9ರಂದು ನಡೆಯಿತು. ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, ಪಿಟಿಎ ಮತ್ತು ಎಚ್.ಐ.ಓ.ಎಸ್.ಎಫ್ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು, ಜಮಾಅತರು ಉಪಸ್ಥಿತರಿದ್ದರು.












