







ನಿಡ್ಪಳ್ಳಿ: ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸುಮಾರು ರೂ.12,35,000 ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡ ನಿರ್ಮಾಣಕ್ಕೆ ಅ.12 ರಂದು ಶಿಲಾನ್ಯಾಸ ನಡೆಯಿತು.ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಭೂಮಿ ಪೂಜೆ ನೆರವೇರಿಸಿದರು.


ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾ, ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಹರೀಶ್ ಕುಮಾರ್ ಪಳಂಬೆ, ನಿರ್ದೇಶಕರಾದ ನಾಗೇಶ ಗೌಡ ಪುಳಿತ್ತಡಿ, ಶೀನಪ್ಪ ಪೂಜಾರಿ ಪಟ್ಟೆ, ಕಾಶ್ಮೀರ ಡಿ’ ಸೋಜಾ ಪಳಂಬೆ, ಗಂಗಾಧರ ಸಿ.ಎಚ್ ಚೆಲ್ಯರಮೂಲೆ, ಸಂಘದ ಕಾರ್ಯದರ್ಶಿ ದಯಾಮಣಿ.ಎಸ್ ರೈ , ಸಹಾಯಕಿ ಪುಷ್ಪಾ, ಪಟ್ಟೆ ಅರ್ತ್ ಮೂವರ್ಸ್ ನ ರಾಧಾಕೃಷ್ಣ ರೈ , ಗುತ್ತಿಗೆದಾರ ರಾಜ್ ಕುಮಾರ್ ಬೆದ್ರಾಳ,ಚಂದ್ರಶೇಖರ ಪ್ರಭು, ರಮೇಶ್ ಆಚಾರ್ಯ ಬರೆಂಬೊಟ್ಟು ಮೊದಲಾದವರು ಉಪಸ್ಥಿತರಿದ್ದರು.













