ಪುತ್ತೂರು ಟೀಂ ಧನ್ಯೋಸ್ಮಿ ಕಲ್ಲಗುಡ್ಡೆ ವತಿಯಿಂದ ನವರಾತ್ರಿ ವಿಶೇಷ ವೇಷ – ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ಸಂಗ್ರಹ ಅಭಿಯಾನ

0

ಪುತ್ತೂರು: ಟೀಂ ಧನ್ಯೋಸ್ಮಿ ಕಲ್ಲಗುಡ್ಡೆ ತಂಡದ ವತಿಯಿಂದ ನವರಾತ್ರಿ ಪ್ರಯುಕ್ತ ವಿಶೇಷ ವೇಷಭೂಷಣದೊಂದಿಗೆ ಅನಾರೋಗ್ಯ ಪೀಡಿತ ವ್ಯಕ್ತಿಗಳ ಚಿಕಿತ್ಸಾ ನೆರವಿಗಾಗಿ ಹಣ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಅ.19ರ ಸೋಮವಾರದಂದು ತಂಡವು ಬೊಳುವಾರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟು ದರ್ಬೆ, ಮುಕ್ರಂಪಾಡಿ ಮಾರ್ಗವಾಗಿ, ಮೊಟ್ಟೆತ್ತಡ್ಕ ಮಾರ್ಗವಾಗಿ ಪಂಜಳ ಹಾಗೂ ಪುರುಪರ ಕಟ್ಟೆ ತನಕ ಸಂಚರಿಸಿ ನಾಗರಿಕರನ್ನು ಮನರಂಜಿಸುವ ಜೊತೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮುದ್ದು ಜೀವಗಳಿಗೆ ನೆರವು ಕೋರಲಿದೆ.

ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಚಿಕಿತ್ಸೆಗೆ ಸಹಾಯ ಮಾಡುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದ್ದು, ನಾಗರಿಕರು ದೊಡ್ಡ ಮನಸ್ಸಿನಿಂದ ಚಿಕ್ಕ ಸಹಾಯ ಮಾಡುವಂತೆ ತಂಡ ಮನವಿ ಮಾಡಿದೆ.

ಸಹಾಯ ಮಾಡಲು ಬಯಸುವವರು ಪೋಸ್ಟರ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಅಥವಾ UPI ID: dhanyosmi@indianbk ಗೆ ಹಣ ವರ್ಗಾಯಿಸಬಹುದು.

LEAVE A REPLY

Please enter your comment!
Please enter your name here