ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವ

0

3ನೇ ದಿನದ ಸಂಭ್ರಮ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ

ಪುತ್ತೂರು: ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದಲ್ಲಿ ನೆಲೆ ನಿಂತಿರುವ ಭಗವಾನ್ ಶ್ರೀರಾಮಚಂದ್ರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 3 ನೇ ದಿನದ ಸಂಭ್ರಮದಲ್ಲಿ ಅ.13 ರಂದು ರಾತ್ರಿ ಎಂ.ಕರುಣಾಕರ ರೈ ಅತ್ರೆಜಾಲು ಇವರಿಂದ ಭಜನಾ ಸೇವೆ, ಸದಾಶಿವನಗರ ಶ್ರೀ ಸದಾಶಿವ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮವನ್ನು ತಿಂಗಳಾಡಿಯ ಪಶು ವೈದ್ಯಕೀಯ ಪರಿವೀಕ್ಷಕ ರೋಹಿತ್‌ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತುಳು ಅಪ್ಪೆ ಕೂಟ ಪುತ್ತೂರು ಇವರಿಂದ ಅನಂತರಾಮ ಬಂಗಾಡಿ ವಿರಚಿತ ಯಕ್ಷಗಾನ ತಾಳಮದ್ದಲೆ ಪ್ರಸಂಗ `ಮೇಧಿನಿ ನಿರ್ಮಾಣ’ ಪ್ರದರ್ಶನಗೊಂಡಿತು.

ರಾತ್ರಿ ನಡೆದ ಅನ್ನಸಂತರ್ಪಣೆಯಲ್ಲಿ ಊರಪರವೂರ ನೂರಾರು ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು. ಶ್ರೀರಾಮ ಮಂದಿರದ ಆಡಳಿತ ಸಮಿತಿ ಹಾಗೂ ಭಜನಾ ಸಮಿತಿಯ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು ಹಾಗೇ 129 ಮನೆಯ ಭಜನಾ ಸೇವಾರ್ಥಿಗಳು ಉಪಸ್ಥಿತರಿದ್ದರು.


ಇಂದು ಶ್ರೀರಾಮ ಮಂದಿರದಲ್ಲಿ
ಅ.14 ರಂದು ರಾತ್ರಿ ಬೆದ್ರುಮಾರು ಅರುಣಾಶಂಕರ ರೈ ಮುಂಬೈ ಇವರ ಭಜನಾ ಸೇವೆ ಹಾಗೇ ಕುಂಬ್ರ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಂಬ್ರ ಶ್ರೀ ಶಾರದಾ ಕಲಾ ಶಾಲೆಯ ವಿದುಷಿ ದೀಪ್ತಿ ರವಿಚಂದ್ರ ಇವರ ಶಿಷ್ಯವೃಂದದವರಿಂದ ನೃತ್ಯ ಸಮೂಹ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here