ಕಾವು :ಗೋಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ:ಡಾ.ನವೀನ್ ಶಂಕರ್ ಬದಿಯಡ್ಕ ಮಳಿ , ಪ್ರಧಾನ ಕಾರ್ಯದರ್ಶಿ : ಕಿರಣ್ ಕುಮಾರ್ ಕಾವು

ಕಾವು :ಕಳೆದ 14 ವರ್ಷಗಳಿಂದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದುಕೊಂಡು ಬರುತ್ತಿರುವ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಕಾವು ಗೋಪೂಜಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಅ.12 ರಂದು ಕಾವು ಶ್ರೀ ಪಂಚಲಿಂಗೆಶ್ವರ ದೇವಾಲಯದಲ್ಲಿ ಗೋಪೂಜಾ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ ಬಲ್ಯಾಯ ಕಾವು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಡೆಯಿತು.


ಸಭೆಯಲ್ಲಿ ಗೋಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಡಾ. ನವೀನ್ ಶಂಕರ್ ಬದಿಯಡ್ಕ ಮಳಿ , ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಕಾವು ಮತ್ತು ಪ್ರಸ್ತುತ ಸಮಿತಿಯ ಅಧ್ಯಕ್ಷರಾಗಿದ್ದ ನಹುಷ ಭಟ್ ಪಳನೀರು ಇವರನ್ನು ಸಮಿತಿಯ ಗೌರವ ಸಲಹೆಗಾರರಾಗಿ ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾಣಿಯಡ್ಕ, ಗಣಪಯ್ಯ ಮಂಜಲ್ತಡ್ಕ, ಸೀತಾರಾಮ ಬಾಳೆಕೊಚ್ಚಿ, ಅಶ್ವಥ್ ಹೊಸಮನೆ, ಮುರಳಿ ಬಾಳೆಕೊಚ್ಚಿ, ಸುಪ್ರೀತ್ ಹೊಸಮನೆ, ವಿಶ್ವನಾಥ ಬಾಳೆಕೊಚ್ಚಿ, ವರುಣ್ ಬಾಳೆಕೊಚ್ಚಿ,ಪ್ರೀತಮ್ ರ್ಪೆನಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here