







ಪುತ್ತೂರು: ಜಗನ್ಮಾತೆಯನ್ನು ನವರೂಪಗಳಲ್ಲಿ ನವವಿಧಗಳಲ್ಲಿ ಭಕ್ತಿ ಭಾವದಿಂದ ಆರಾಧಿಸುವ ಆಚರಣೆಯೇ ನವರಾತ್ರಿ ಎಂದು ಕರೆಯುತ್ತಾರೆ. ಶರನ್ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಕರಾವಳಿಯಲ್ಲಿ ಈ ಒಂಭತ್ತು ದಿನಗಳ ಉತ್ಸವಕ್ಕೆ ವಿಶೇಷ ಮಹತ್ವವಿದೆ. ಅದೇ ರೀತಿ ಪುತ್ತೂರಿನ ಬೊಳುವಾರಿನಲ್ಲಿರುವ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಕಳೆದ 86 ವರ್ಷಗಳಿಂದ ನವರಾತ್ರಿ ಉತ್ಸವವು ಅದ್ದೂರಿಯಾಗಿ ನಡೆಯುತ್ತಿದ್ದು, 87ನೇ ವರ್ಷದ ಉತ್ಸವವು ಅ.11 ರಿಂದ ಪ್ರಾರಂಭಗೊಂಡಿದೆ ಅದರಂತೆ ಅ.19ರಂದು ಉರ್ಲಾ೦ಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಮತ್ತು ಶ್ರೀ ಸರಸ್ವತೀ ಭಜನಾ ಮಂಡಳಿಯವರ ನೆರವಿನೊಂದಿಗೆ ಆಂಜನೇಯ ಮಂತ್ರಾಲಯಕ್ಕೆ ಉಲ್ಪೆಯನ್ನು ತರಲಾಗುತ್ತದೆ. ರಾತ್ರಿ ಮಂತ್ರಾಲಯದಿಂದ ವೈಭವದ ಶ್ರೀ ದೇವಿಯ ಮೆರವಣಿಗೆ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಾರ್ಕೆಟ್ ರಸ್ತೆಯಾಗಿ ಪುನಃ ಮಂತ್ರಾಲಯಕ್ಕೆ ಬಂದು ಶ್ರೀ ಮಹಾಶಕ್ತಿ ಪೂಜೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.



ರಾತ್ರಿ ದಿ. ಗಂಗಣ್ಣ ಮತ್ತು ದಿ. ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ ಮತ್ತು ಬಳಗದವರಿಂದ ಬೊಳುವಾರಿನ ಸುಬ್ರಹ್ಮಣ್ಯ ನಗರದ ಮೈದಾನದಲ್ಲಿ ತಾಲೀಮು ಬೆಂಕಿಯಾಟ ಪ್ರದರ್ಶನ, ಹುಲಿಯಾಟ ಪ್ರದರ್ಶನ ನಡೆಯಲಿದೆ.



ಅ.20 ರಂದು ಬೆಳಗ್ಗೆ 8.15ಕ್ಕೆ ಕಲಶ ವಿಸರ್ಜನೆ ನಡೆಯಲಿದೆ. ಸೇವೆ ಮಾಡಿಸುವವರು 9880732895, 9845701676 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










