







ಗೌರವಾಧ್ಯಕ್ಷ ಮಸೂದ್ ತಂಙಳ್ ಕೂರತ್, ಅಧ್ಯಕ್ಷ ರಫೀಕ್ ಸಅದಿ, ಪ್ರ. ಕಾರ್ಯದರ್ಶಿ ಶಾಕೀರ್, ಖಜಾಂಜಿ ಯೂನಸ್ ಬಗ್ಗು ಮೂಲೆ
ಪುತ್ತೂರು : ಅಳಕೆಮಜಲು ಮುಯ್ಯುದ್ದೀನ್ ಜುಮ್ಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ಆಡಳಿತ ಸಮಿತಿಯ ಗೌರವಾಧ್ಯಕ್ಷ ಮಸೂದ್ ತಂಙಳ್ ಕೂರತ್ ರವರ ಅಧ್ಯಕ್ಷತೆಯಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಸಮಿತಿಯ ಗೌರವ ಅಧ್ಯಕ್ಷರಾಗಿ ಮಸೂದ್ ತಂಙಳ್ ಕೂರತ್, ಅಧ್ಯಕ್ಷರಾಗಿ ರಫೀಕ್ ಸಅದಿ ಅಳಕೆ ಮಜಲು, ಪ್ರಧಾನ ಕಾರ್ಯದರ್ಶಿಯಾಗಿ ಶಾಕೀರ್, ಖಜಾಂಜಿಯಾಗಿ ಯೂನಸ್ ಬಗ್ಗುಮೂಲೆರವರನ್ನು ಆಯ್ಕೆ ಮಾಡಲಾಯಿತು.



ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಝಾಕ್ ಅಲ್ ಮದೀನಾ, ಶಾಫಿ ಅಂತರಗುತ್ತು, ಜಂಟಿ ಕಾರ್ಯದರ್ಶಿಗಳಾಗಿ ಹಾರಿಸ್ ಕೊಣಿಮಾರ್, ಸೈಫುದ್ದೀನ್ ಮಸ್ಕತ್, ಜಾಬೀರ್ ಅಳಕೆಮಜಲುರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರುಗಳನ್ನಾಗಿ ಶಫೀಕ್ ಅಳಕೆಮಜಲು, ಖಾದರ್ ಕರೆಕ್ಕೋಡಿ, ಉಮರ್ ಬಗ್ಗುಮೂಲೆ, ಆಶ್ವದ್ ಅಳಕೆಮಜಲು, ಅಬುಸ್ವಾಲಿ ಅಳಕೆಮಜಲುರವರುಗಳನ್ನು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರಾಗಿ ಶಾಕೀರ್ ಮಸ್ಕತ್, ಬಾತೀಶ್ ಅಳಕೆಮಜಲು,ಮನ್ಸೂರ್ರವರನ್ನು ನೇಮಕ ಮಾಡಲಾಯಿತು.










