ನಿಂತಿಕಲ್ಲು : ಹೋಟೆಲ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವು – ಯುಡಿಆರ್ ದಾಖಲು

0

ಬೆಳ್ಳಾರೆ: ಹೋಟೆಲ್‌ನಲ್ಲಿ ಮಲಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬಾಳಿಲ ಗ್ರಾಮದ ನಿಂತಿಕಲ್ಲು ಎಂಬಲ್ಲಿ ನಡೆದಿದೆ.

ಕಡಬ ತಾಲೂಕು ಕಾಣಿಯೂರು ಗ್ರಾಮದ ಬಾರೆತ್ತಡಿ ಮನೆ ನಿವಾಸಿ ಪ್ರಶಾಂತ್ (30) ನೀಡಿದ ದೂರಿನಂತೆ, ಅವರ ಅಣ್ಣ ನವೀಶ್ (38) ಕಳೆದ 10 ತಿಂಗಳಿಂದ ಬಾಳಿಲ ಗ್ರಾಮದ ನಿಂತಿಕಲ್ಲುನಲ್ಲಿ ಸ್ವಂತ ಹೋಟೆಲ್ ನಡೆಸುತ್ತಿದ್ದರು.ಅ.15ರಂದು ರಾತ್ರಿ 8 ಗಂಟೆಗೆ ಹೋಟೆಲ್ ಬಂದ್ ಮಾಡಿ ಅಲ್ಲೇ ಮಲಗಿದ್ದರು. ಅ.16ರ ಬೆಳಗಿನ ಜಾವ 2.30ಕ್ಕೆ ನವೀಶ್ ಅವರು ತಮ್ಮ ಭರತ್ ಅವರಿಗೆ ಕರೆ ಮಾಡಿ ತನಗೆ ಹುಷಾರಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ಪ್ರಶಾಂತ್ ಮತ್ತು ಭರತ್ ಸ್ಥಳಕ್ಕೆ ಹೋಗಿ ನೋಡಿದಾಗ ನವೀಶ್ ಚಾಪೆ ಮೇಲೆ ಮಲಗಿದ್ದರು.

ಬೆಳಿಗ್ಗೆ 6.30ಕ್ಕೆ ಮತ್ತೆ ಹೋಟೆಲ್‌ಗೆ ಹೋಗಿ ನೋಡಿದಾಗ ನವೀಶ್ ಮಲಗಿದಲ್ಲೇ ನರಳಾಡುತ್ತಿದ್ದರು. ಕೂಡಲೇ 108 ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಬೆಳಿಗ್ಗೆ 7.40ಕ್ಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಮೃತರು ಅವಿವಾಹಿತರಾಗಿದ್ದು, ತಾಯಿ ಪುಷ್ಪಾವತಿ, ಸಹೋದರರಾದ ಪ್ರಶಾಂತ್ ಮತ್ತು ಭರತ್, ಸಹೋದರಿ ವೀಣಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here