







ಪುತ್ತೂರು: ಆರೋಗ್ಯಕರ ಜೀವನಶೈಲಿಗೆ ಪೂರಕವಾದ ಗುಣಮಟ್ಟದ ಒಣಹಣ್ಣುಗಳು ಹಾಗೂ ವಿವಿಧ ಆಹಾರ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸುವ `ಎಂಜಿಎಂ ಡ್ರೈ ಫ್ರುಟ್ಸ್ ಹಬ್’ ಅ.16ರಂದು ನಗರದ ಮುಖ್ಯರಸ್ತೆಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ಶುಭಾರಂಭಗೊಂಡಿತ್ತು.
ಮಳಿಗೆಯನ್ನು ಲಕ್ಷ್ಮೀದೇವಿ ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಭಟ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಉಪಾಧ್ಯಕ್ಷ ನಾಗೇಶ್ ಟಿ.ಎಸ್., ನಗರ ಮಂಡಲದ ಕಾರ್ಯದರ್ಶಿ ಶಶಿಧರ ನಾಯಕ್, ಮಕ್ಕಳ ತಜ್ಞ ಡಾ.ಎಂ.ಎನ್ ಶೆಣೈ, ಬಾಬು ಕಾಮತ್, ಪ್ರಸಾದ್ ಕಾಮತ್, ಶ್ರೀಧರ ಕಾಮತ್, ಸೀಮಾ ಭಟ್, ರೂಪಾ ನಾಯಕ್, ನೆಲ್ಲಿಕಟ್ಟೆಯ ಕಾರ್ ಡೀಲರ್, ಸುಂದರ ಪೂಜಾರಿ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮ್ಹಾಲಕಿ ಕೆ.ರಾಧಿಕಾ ಕಾಮತ್ ಮತ್ತು ಶ್ರೀಕಾಂತ್ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.
ಮಳಿಗೆಯಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್ನಟ್, ಒಣದ್ರಾಕ್ಷಿ, ಖರ್ಜೂರ, ಮಿಕ್ಸ್ಡ್ ನಟ್ಸ್, ಫ್ಲೇವರ್ಡ್ ನಟ್ಸ್, ವಿವಿಧ ಸೀಡ್ಸ್, ಮಸಾಲೆ ಪದಾರ್ಥಗಳು, ನಮ್ಕೀನ್, ಹರ್ಬಲ್ ಉತ್ಪನ್ನಗಳು ಹಾಗೂ ಗೃಹೋಪಯೋಗಿ ಉತ್ಪನ್ನಗಳು ಲಭ್ಯವಿರಲಿವೆ.ಗ್ರಾಹಕರ ಆರೋಗ್ಯ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವ ಮಳಿಗೆಯಲ್ಲಿ ಪ್ರೀಮಿಯಂ ಗುಣಮಟ್ಟದ, ನೈಸರ್ಗಿಕ ಉತ್ಪನ್ನಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಕೃತಕ ಬಣ್ಣಗಳು ಹಾಗೂ ಸಂರಕ್ಷಕಗಳನ್ನು ಬಳಸದೆ ತಯಾರಿಸಿದ ಒಣಹಣ್ಣುಗಳೂ ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಸಂಸ್ಥೆಯ ಮ್ಹಾಲಕಿ ರಾಧಿಕಾ ಶ್ರೀಕಾಂತ್ ಕಾಮತ್ ತಿಳಿಸಿದ್ದಾರೆ.


ಶುಭಾರಂಭದ ಪ್ರಯುಕ್ತ ಶೇ.10-40 ಡಿಸ್ಕೌಂಟ್:
ಗುಣಮಟ್ಟದ ಒಣಹಣ್ಣುಗಳು ಹಾಗೂ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಹೊಸ ಮಳಿಗೆ ಉತ್ತಮ ಆಯ್ಕೆಯಾಗಲಿದೆ. ಮಳಿಗೆಯ ಉದ್ಘಾಟನಾ ಸಂಭ್ರಮದ ಅಂಗವಾಗಿ ಗ್ರಾಹಕರಿಗೆ ಖರೀದಿಯ ಮೇಲೆ ಶೇ. 10ರಿಂದ 40ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದ್ದು, ಇದು ಸೀಮಿತ ದಿನಗಳ ವರೆಗೆ ಮಾತ್ರ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.













