







ಪುತ್ತೂರು: ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.


ಕಡಬ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ನೀಡಿದ ದೂರಿನಂತೆ, ಅವರು ಪುತ್ತೂರಿನ ಲಾಡ್ಜ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಅ.17ರಂದು ರಾತ್ರಿ ಲಾಡ್ಜ್‌ನಲ್ಲಿದ್ದ ವೇಳೆ ಆರೋಪಿಗಳಾದ ಫಾರೂಕ್, ಸೋನು ಮತ್ತು ಇಶಾನ್ ಎಂಬವರು ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.



ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.










