ಕುಂಬ್ರ ಮರ್ಕಝುಲ್ ಹುದಾದ ವಿದ್ಯಾರ್ಥಿನಿ ರೈಹಾನರಿಗೆ `ಚೆನ್ನವೀರ ಕಣವಿ’ ಪ್ರಶಸ್ತಿ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಥಿಯೋಲಜಿ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರೈಹಾನ ಅಲ್ ಮಾಹಿರಾ ಅವರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ಉದಯೋನ್ಮುಖ ಸಾಹಿತಿಗಳಿಗೆ ವರ್ಷಂಪ್ರತಿ ನೀಡುವ ಚೆನ್ನವೀರ ಕಣವಿ ಪ್ರಶಸ್ತಿ ಲಭಿಸಿದೆ. ದಾರವಾಡದ ಚೆನ್ನವಿರ ಕಣವಿ ಸಭಾಂಗಣದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆದಿದೆ.


ರೈಹಾನರವರ `ಬಾಳು ಮರೆತ ಜೀವಗಳು’ ಎಂಬ ಸಾಹಿತ್ಯಕ್ಕೆ ಈ ಪ್ರಶಸ್ತಿ ಲಭಿಸಿದ್ದು, 2026ರ ಸಾವಿರಾರು ಕವನಗಳ ಪೈಕಿ ಇದು ಪ್ರಥಮ ಸ್ಥಾನ ಗಳಿಸಿದೆ. ಪ್ರಶಸ್ತಿ ಪದಕ ಜೊತೆಗೆ ಫಲಕ ಮತ್ತು ಕ್ಯಾಶ್ ಅವಾರ್ಡ್ ಪಡೆದುಕೊಂಡಿದ್ದಾರೆ. ಇವರು ಕುಂಬ್ರ ಕೊಲತ್ತಡ್ಕ ನಿವಾಸಿ ಅಮೀರ್ ಅಹ್ಮದ್ ಶಾಫಿ ಮತ್ತು ಝುಬೈದಾರವರ ಪುತ್ರಿ.

LEAVE A REPLY

Please enter your comment!
Please enter your name here