ಕುಂಬ್ರ ಮರ್ಕಝುಲ್ ಹುದಾ ಗರ್ಲ್ಸ್ ಹೈಸ್ಕೂಲ್ ವತಿಯಿಂದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

0

ಪುತ್ತೂರು: ಶಿವರಾಮ ಕಾರಂತರ ಜನ್ಮದಿನದ ಪ್ರಯುಕ್ತ ಕುಂಬ್ರ ಮರ್ಕಝುಲ್ ಹುದಾ ಗರ್ಲ್ಸ್ ಹೈಸ್ಕೂಲ್ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡ ಸಾಹಿತ್ಯಲೋಕಕ್ಕೆ ಶಿವರಾಮ ಕಾರಂತರ ಕೊಡುಗೆ ಎಂಬ ವಿಷಯದಲ್ಲಿ ತಾಲೂಕಿನ 15ಕ್ಕೂ ಹೆಚ್ಚು ಹೈಸ್ಕೂಲ್‌ಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಪುತ್ತೂರಿನ ಶ್ರೀರಾಮಕ್ರಷ್ಣ ಹೈಸ್ಕೂಲ್ ವಿಭಾಗದ 9 ನೇ ತರಗತಿಯ ವಿದ್ಯಾರ್ಥಿನಿ ತಸ್ಮಿ ಪೂಂಜ ಪಿ ಗಳಿಸಿದರೆ, ದ್ವಿತೀಯ ಸ್ಥಾನವನ್ನು ದೋಲ್ಪಾಡಿ ಸರಕಾರಿ ಶಾಲೆಯ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೀರ್ತಿಕಾ, ತೃತೀಯ ಸ್ಥಾನವನ್ನು ಪಾಣಾಜೆಯ ಸುಭೋಧ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಬೀಬಿ ಫಾತಿಮಾ ಖಾನಂ ಗಳಿಸಿದರು.

LEAVE A REPLY

Please enter your comment!
Please enter your name here