ಕೆಎಸ್‌ಆರ್‌ಟಿಸಿ ಮುಕ್ರಂಪಾಡಿ ಘಟಕದಲ್ಲಿ ಆಯುಧ ಪೂಜೆ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಆಯುಧ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅ.20ರಂದು ನಡೆಯಿತು. ಬೆಳಗ್ಗೆ ಗಣಹೋಮ, ದುರ್ಗಾಪೂಜೆ, ಆಯುಧ ಪೂಜೆ, ವಾಹನ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಜರಗಿತು. ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಪುತ್ತೂರು ಬಸ್ ನಿಲ್ದಾಣದಲ್ಲಿಯೂ ಚಾಲನಾ ಸಿಬ್ಬಂದಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು. ಬಿರುಮಲೆ ಪ್ರಜ್ಞಾವಿಕಲಚೇತನರ ಆಶ್ರಮಕ್ಕೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ವಿತರಿಸಲಾಯಿತು.

ಅಪರಾಹ್ನ ಪ್ರತಿಭಾ ಪುರಸ್ಕಾರ, ಸಭಾ ಕಾರ್ಯಕ್ರಮ ನಡೆಯಿತು. ಘಟಕ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕುಶಲಕರ್ಮಿ ಗಂಗಾಧರ ಸ್ವಾಗತಿಸಿದರು. ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್ ದಿಕ್ಕೂಚಿ ಭಾಷಣ ಮಾಡಿದರು. ಪಾರುಪತ್ತೆಗಾರ ಸಂಜೀವ ಗೌಡ ಆಯುಧ ಪೂಜೆಯ ಮಹತ್ವ ತಿಳಿಸಿದರು. 34 ವರ್ಷಗಳಿಂದ ನಿಗಮದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಹಿರಿಯ ಚಾಲಕ ವಾಸುದೇವ ಗೌಡರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಘಟಕದ ಸಿಬ್ಬಂದಿಗಳ ಮಕ್ಕಳನ್ನು ಶಾಲು ಹೊದಿಸಿ ಗೌರವಿಸಲಾಯಿತು.


ಸಂಸ್ಥೆಯ ಸಿಬ್ಬಂದಿಗಳು, ಅವರ ಕುಟುಂಬಸ್ಥರು ಮತ್ತು ನಿವೃತ್ತಿ ಸಿಬ್ಬಂದಿಗಳು ಭಾಗವಹಿಸಿದ್ದರು. ಮಾಧವ ಶೆಣೈ, ಪಿ.ವಿ. ಭಟ್, ರಾಜೇಶ್, ಗಂಗಾಧರ್ ಹಾಗೂ ಅನೀಶ್ ಕಾರ್ಯಕ್ರಮ ನಿರೋಪಿಸಿದರು.

LEAVE A REPLY

Please enter your comment!
Please enter your name here