ಕಾಣಿಯೂರು ಪ್ರಗತಿಯಲ್ಲಿ ಗಣಪತಿ ಹವನ, ಶಾರದಾಪೂಜೆ, ಆಯುಧ ಪೂಜೆ, ವಾಹನ ಪೂಜೆ

0

ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಅ.19ರಂದು ಗಣಪತಿ ಹವನ, ಶಾರದಾಪೂಜೆ, ಆಯುಧಪೂಜೆ ಮತ್ತು ವಾಹನ ಪೂಜೆಯ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ,ಶಾಲಾ ಆಡಳಿತ ಮಂಡಳಿಯ ಟ್ರಸ್ಟಿಗಳಾದ ವೃಂದಾ ಜೆ ರೈ ಮಾದೋಡಿ ದೇವಿಕಿರಣ್ ರೈ ಮಾದೋಡಿ,ಹರಿಚರಣ್ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿಗಳಾದ ವಸಂತ ರೈ ಕಾರ್ಕಳ, ಹೇಮಾನಾಗೇಶ್ ರೈ ಮಾಳ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಮುಂಡಾಳ,ಮುಖ್ಯ ಗುರುಗಳು, ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕ ಬಂಧುಗಳು ಉಪಸ್ಥಿತರಿದ್ದರು. ಪ್ರಶಾಂತ್ ಭಟ್ ಕಟ್ಟತ್ತಾರು ಪೌರೋಹಿತ್ಯ ನಡೆಸಿಕೊಟ್ಟರು.


ಕಾರ್ಯಕ್ರಮದ ವಿಶೇಷ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಾಗೂ ಸುಬ್ರಹ್ಮಣ್ಯೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಿದ್ಯಾರ್ಥಿಗಳಿಗೆ ಶಂಖನಾದ ಸ್ಪರ್ಧೆಯು ನಡೆಯಿತು. ಬಾಲಶಾರದೆಯ ವೇಷಧಾರಿಯಾಗಿ ಎಲ್ ಕೆ ಜಿಯ ಪುಟಾಣಿ ಸಂಸ್ಥಿತ ಶೆಟ್ಟಿ ಭಕ್ತಿಭಾವದಿಂದ ಕಂಗೊಳಿಸಿದರು.ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದದವರಿಂದ ಭಜನೆ ಸಂಕೀರ್ತನೆಯು ಭಕ್ತಿ ಭಾವದಿಂದ ನಡೆಯಿತು. ನಂತರ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

LEAVE A REPLY

Please enter your comment!
Please enter your name here