ಉಪ್ಪಿನಂಗಡಿ  ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ಕ್ಷೇತ್ರ ದಲ್ಲಿ ” ತೆನೆ ಮುಹೂರ್ತ – ನವರಾತ್ರಿ ಪೂಜೆ – ಹೊಸಕ್ಕಿ ಊಟ”

0

ಉಪ್ಪಿನಂಗಡಿ: ಉಪ್ಪಿನಂಗಡಿ  ಸಮೀಪದ  ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ಕ್ಷೇತ್ರ ದಲ್ಲಿ ಅ. 11 ರಂದು ತೆನೆಮುಹೂರ್ತದಿಂದ ಪ್ರಾರಂಭಗೊಂಡು ಅ.19ರವರೆಗೆ ಸಂಜೆ ಶ್ರೀ ಭದ್ರಕಾಳಿ ಅಮ್ಮನವರಿಗೆ ನವರಾತ್ರಿಪೂಜೆ ಊರಪರವೂರ ಭಕ್ತರಿಂದ  ವಿವಿಧ ರೀತಿಯ ಸೇವೆ,  ಸಾಂಸ್ಕೃತೀಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಿತು.

ಅ.20 ರಂದು ಆಯುಧ ಪೂಜೆ, ಶ್ರೀಮಹಾವಿಷ್ಣು ಮೂರ್ತಿ ದೇವರಿಗೆ ವಿವಿಧ ರೀತಿಯ ಸೇವೆ ಹಾಗು” ಹೊಸಕ್ಕಿ” ನೈವೇದ್ಯದೊಂದಿಗೆ ಮಹಾಪೂಜೆ ನಡೆಯಿತು.

ಆಡಳಿತ ಮಂಡಳಿಯ ಅಧ್ಯಕ್ಷರು, ಶ್ರೀ ಭಾಸ್ಕರ್ ಬಾರ್ಯ,ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ , ಉಲ್ಲಾಸ್  ಪಾಂಗಣ್ಣಾಯ, ಗಣೇಶ್ ನೂರಿತ್ತಾಯ, ರಾಜೇಶ್  ರಾವ್ ಬಾರ್ಯ, ಧಾರ್ಮಿಕ ಕಾರ್ಯದಲ್ಲಿ ಸಹಕರಿಸಿದರು, ಉಪಾಧ್ಯಕ್ಷ ನಾರಾಯಣಗೌಡ, ಕಾರ್ಯದರ್ಶಿ ಪ್ರಶಾಂತ್ ಪೈ, ಕೋಶಾಧಿಕಾರಿ ಶೇಷಪ್ಪ ಸಾಲಿಯಾನ್, ಟ್ರಸ್ಟಿಗಳಾದ, ವಿದ್ಯಾ ಪ್ರಭಾಕರ್, ಪ್ರಶಾಂತ್ ಕುಮಾರ, ಮನೋಹರ್ ಶೆಟ್ಟಿ,ಪ್ರವೀಣ್ ಎಂ, ಶಿವರಾಮ ನಾಯ್ಕ,ಜಿ.ಉಮೇಶ, ರಾಮಣ್ಣಗೌಡ, ಮೋನಪ್ಪ ಗೌಡ, ಅರುಣ ಬಂಗೇರ, ವಿಶ್ವನಾಥ್ ಗೌಡ, ಚೇತನ್ ಕುಮಾರ್,ಬಾಲಕೃಷ್ಣ ಶೆಟ್ಟಿ, ಸುದರ್ಶನ್, ಸುದೇಶ್, ಶ್ರೀಮತಿ ನವೀನ, ವಿಜಯಲಕ್ಷ್ಮಿ ರೈ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ಪ್ರಚಾರ ಪ್ರಮುಖ್ ದಯಾನಂದ. ಪಿ, ಎಲ್ಲಾ ಬೈಲುವಾರುಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಬೈಲುವಾರು ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here