







ನಿಡ್ಪಳ್ಳಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಣಾಜೆ ಇದರ ವತಿಯಿಂದ 37 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ಅ.21 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರ ಪೌರೋಹಿತ್ಯದಲ್ಲಿ ರಣಮಂಗಲ ಸಭಾಭವನದಲ್ಲಿ ನಡೆಯಿತು.


ಧಾರ್ಮಿಕ ಸಭೆ- ಸನ್ಮಾನ ಕಾರ್ಯಕ್ರಮ:
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅದಾಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಬಿ. ರಾಮ್ ಕುಮಾರ್ ಉದ್ಘಾಟಿಸಿದರು.ಧಾರ್ಮಿಕ ಉಪನ್ಯಾಸ ನೀಡಿದ ವಿಶ್ರಾಂತ ಪ್ರಾಚಾರ್ಯ ಬಿ.ವಿ ಸೂರ್ಯನಾರಾಯಣ ಅವರು ಮಾತನಾಡಿ ಶಾರದೆ ಅಥವಾ ಸರಸ್ವತಿ ಆರಾಧನೆ ಯ ಮಹತ್ವ,ಶಾರದೆ ಪದದ ಅರ್ಥ, ವಿದ್ಯೆಯ ಮಹತ್ವದ ಬಗ್ಗೆ ವಿವರಿಸಿ ಜ್ಞಾನ ಮತ್ತು ವಿಧ್ವತ್ತು ಇರುವ ವ್ಯಕ್ತಿಯು ಪ್ರಪಂಚದ ಯಾವುದೇ ಬಾಗಕ್ಕೆ ಹೋದರೂ ಅಲ್ಲಿ ಗೌರವಕ್ಕೆ ಅರ್ಹ ನಾಗುತ್ತಾನೆ ಹಾಗೂ ವಿದ್ಯೆಯನ್ನು ಅಥವಾ ಪಾಂಡಿತ್ಯವನ್ನು ಹೊಂದಿದ್ದರೆ ಅದರಲ್ಲಿ ಸಹೋದರರಿಗೆ ಪಾಲು ಕೊಡಬೇಕಿಲ್ಲ, ಅರಸನಿಗೆ ತೆರಿಗೆ ಪಾವತಿಸಬೇಕಿಲ್ಲ,ಚೋರರು ಅಪಹರಿಸುವ ಭಯವಿಲ್ಲ, ಅದು ಆ ವ್ಯಕ್ತಿಗೆ ಭಾರವಾಗಿ ಇರುವುದಿಲ್ಲ. ಖರ್ಚು ಮಾಡಿದಂತೆ ಅದರ ಮೌಲ್ಯವೂ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾ ಸಂಪತ್ತು ಎಲ್ಲಾ ಸಂಪತ್ತು ಗಳಿಂದ ಮಿಗಿಲಾದದ್ದು ಎಂದು ವಿದ್ಯೆಯ ಮಹತ್ವ ಮತ್ತು ಶಾರಾದೊತ್ಸವದ ಆಚರಣೆಯ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.




ಸೂರಂಬೈಲು ತರವಾಡು ಕುಟುಂಬದ ಹಾಗೂ ಬಂಧುಗಳ ದೈವ ದೇವರ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆನಂದ ರೈ ಸೂರಂಬೈಲು ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೋಡಿಂಬಾಡಿ,ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,ನಿವೃತ್ತ ಶಿಕ್ಷಕಿ ಲಿಂಗಮ್ಮ ಬೆಟ್ಟಂಪಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ರೂಪಲೇಖ,ಬೆಂಗಳೂರು ಸಾಫ್ಟ್ವೇರ್ ಇಂಜಿನಿಯರ್ ಕೇಶವ ಕೃಷ್ಣ ರಾಜ್ ಪಾಲ್ತಮೂಲೆ ,ರಾಷ್ಟ್ರೀಯ ಕಬ್ಬಡಿ ಆಟಗಾರ ಪ್ರಶಾಂತ್ ರೈ ಕೈಕಾರ,
ಕುಕ್ಕುತ್ತಡಿ ದರ್ಬೆ ನಾಗ ಬಿರ್ಮೆರ್ ಕೋಟಿ ಚೆನ್ನಯ ಗರಡಿ ಅಧ್ಯಕ್ಷ ಜಯರಾಮ ಪೂಜಾರಿ,ಉದ್ಯಮಿ ಪ್ರಮೋದ್ ಕುಮಾರ್ ರೈ ಮುಂಡಾಸು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಾರ್ವಜನಿಕ ಶ್ರೀ ಶಾರ ದೋತ್ಸವ ಸಮಿತಿ ಉಪಾಧ್ಯಕ್ಷ ಉಮೇಶ್ ಬಲ್ಯಾಯ ಕೊಂದಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ರಾಮ್ ಕುಮಾರ್ ಇವರ ಪ್ರಾಯೋಜಕತ್ವದ “ಬೊಳ್ಳಿಂಬಳ ನಾರ್ಣ ಪ್ಪಯ್ಯ ದೇವಸ್ಯ ಚುಬ್ಬಜ್ಜ ರವರ ಸವಿನೆನಪಗಾಗಿ “ಪೋಷಕ ಪ್ರೋತ್ಸಾಹಕ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ವಿಶಿಷ್ಟಶ್ರೇಣಿ ವಿದ್ಯಾರ್ಥಿ ವೇತನ, ಹಾಗೂ ಕ್ರಿಯಾತ್ಮಕ ಚಿಂತನೆ, ವೈಜ್ಞಾನಿಕ ಜ್ಞಾನ ವಿಕಾಸ ಗಳಿಗಾಗಿ ಪ್ರತಿ ವರ್ಷ ನೀಡುತ್ತಿರುವ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವಿಶೇಷವಾಗಿ ಕೆಲವು ವರ್ಷಗಳ ಹಿಂದೆ ತಾವು ವಿದ್ಯಾರ್ಥಿಗಳಾಗಿದ್ದ ಸಂಧರ್ಭದಲ್ಲಿ ಪ್ರೋತ್ಸಾಹಕ ಬಹುಮಾನ ಸ್ವೀಕರಿಸಿದ್ದವರು ಕೃತಜ್ಞತಾ ಪೂರ್ವಕವಾಗಿ ರಾಮ್ ಕುಮಾರ್ ರವರಿಗೆ ಗೌರವರ್ಪಣೆ ಮಾಡಿದರು.ಅನ್ವಿತಾ, ಸಂಹಿತಾ ಪ್ರಾರ್ಥಿಸಿದರು.
ಸಮಿತಿಯ ಪ್ರದಾನ ಕಾರ್ಯದರ್ಶಿ ಜಯರಾಮ ರೈ ಚಂಬರಕಟ್ಟ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಪ್ರಿತೇಶ್ ವಾಣಿಯನ್ ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕಾರಿ ಸಮಿತಿಯ ಸದಾಶಿವ ರೈ, ಉಪೇಂದ್ರ ಬಲ್ಯಾಯ, ರಘುನಾಥ ಪಾಟಾಳಿ, ಲಕ್ಷ್ಮಿ ನಾರಾಯಣ ರೈ, ರವಿಶಂಕರ್ ಶರ್ಮ ,ಪದ್ಮನಾಭ ರೈ,ಜಾಣು ನಾಯ್ಕ, ಪುಷ್ಪರಾಜ್ ರೈ, ನಾರಾಯಣ ಪೂಜಾರಿ, ಸಂತೋಷ್ ರೈ.ಜಿ, ಶ್ರೀ ಹರಿ ನಡುಕಟ್ಟ , ಪ್ರವೀಣ್ ರೈ, ಶ್ರೀ ಪ್ರಸಾದ್ , ಸುಭಾಷ್ ರೈ, ರಮೇಶ್ ರೈ, ರವೀಂದ್ರ ಭಂಡಾರಿ , ಸಂತೋಷ್ ರೈ ಕೆ, ಪ್ರವೀಣ್ ಶೆಟ್ಟಿ, ರಾಮಚಂದ್ರ ಮಣಿಯಾಣಿ,ಹರೀಶ್ ಕುಮಾರ್ ಜಿ.ಎಸ್, ಜಯಕುಮಾರ್ ರೈ, ಬಾಲಕೃಷ್ಣ ಪೂಜಾರಿ, ಚಂದ್ರಶೇಖರ ರೈ, ಮನೋಜ್ ರೈ, ಹರೀಶ್ ಪೂಜಾರಿ, ಪ್ರದೀಪ್, ಹರೀಶ್ ಕುಲಾಲ್, ಸುಶಾಂತ್ ಮಣಿ ಯಾಣಿ, ಭರತ್ ಆಳ್ವ, ರಘುನಾಥ ರೈ, ಜಿ. ದಾಮೋದರ ಮಣಿ ಯಾಣಿ, ಡಾ.ಅಖಿಲೇಶ್ ಪಿ.ಎಂ ಸಹಿತ ಊರ ಪರವೂರ ಸಾವಿರಾರು ಭಕ್ತರು ಪಾಲ್ಗೊಂಡರು.
ಧಾರ್ಮಿಕ ಕಾರ್ಯಕ್ರಮಗಳು:
ಬೆಳಿಗ್ಗೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಟೆ,ಗಣಪತಿ ಹವನ, ಶ್ರೀ ಭಾರತಾಂಭಾ ಭಜನಾ ಸಂಕೀರ್ತನಾ ಆರ್ಲಪದವು ಇವರಿಂದ ಭಜನಾ ಕಾರ್ಯಕ್ರಮ. ಸಾಮೂಹಿಕ ಆಯುಧ ಪೂಜೆ, ಅಕ್ಷರಾರಂಭ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ ಚೈತನ್ಯ ಕಲಾವಿದರು ಬೈಲೂರು ಇವರು ಅಭಿನಯಿಸುವ ಹಾಸ್ಯಮಯ ನಾಟಕ ರಾಘು ಮಾಸ್ಟ್ರು ಯಶಸ್ವಿಯಾಗಿ ಪ್ರದರ್ಶನ ಗೊಂಡಿತು.
ಆಕರ್ಷಕ ಶೋಭಾ ಯಾತ್ರೆ:
ಸಂಜೆ ಮಹಾಪೂಜೆ ನಡೆದು ಶ್ರೀ ದೇವಿ ಶೋಭಾಯಾತ್ರೆ ನಡೆದು ಜಲಸ್ತಂಭನ ಗೊಳಿಸಲಾಯಿತು. ಶೋಭಾ ಯಾತ್ರೆಯಲ್ಲಿ ಶ್ರೀ ಶಾಸ್ತಾರ ಕಲಾ ಸಮಿತಿ ಮಣಿಯೂರು ದೇಲಂಪಾಡಿ ಇವರಿಂದ ಸಿಂಗಾರಿ ಮೇಳ ವಿಶೇಷ ಆಕರ್ಷಣೆಯಾಗಿತ್ತು.ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.
ಸನ್ಮಾನ ಕಾರ್ಯಕ್ರಮ:
ತುಳು ಭಾಷೆಗೆ ರಾಜ್ಯದ ದ್ವಿತೀಯ ಭಾಷೆ ಸ್ಥಾನಮಾನ ದೊರೆಯಲು ಕಾರಣ ಕರ್ತರಾದ ಶಾಸಕ ಅಶೋಕ್ ಕುಮಾರ್ ರೈಯವರನ್ನು ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಸಂಘ ಆರ್ಲಪದವು ಹಾಗೂ ಶಾರದೊತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಅಲ್ಲದೆ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕರಾಗಿ ಆಯ್ಕೆ ಯಾದ ಶಶಿಕುಮಾರ್ ರೈ ಬಾಲ್ಯೊಟ್ಟು ಇವರನ್ನು ಶ್ರೀ ಸಾರ್ವಜನಿಕ ಶಾರದೋತ್ಸವ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.











