ಮಂಗಳೂರು-ಕೊಡಗು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಶಿವಪ್ರಸಾದ್ ಅಜಿಲರು ಪದೋನ್ನತಿ

0

ಅಳದಂಗಡಿ: ಬೆಳ್ತಂಗಡಿ ಲೋಕೋಪಯೋಗಿ ಉಪವಿಭಾಗದಲ್ಲಿ ಹಲವಾರು ವರ್ಷ ಕಾರ್ಯನಿರ್ವಹಿಸುತ್ತಿದ್ದ ಇಂಜಿನಿಯರ್ ಶಿವಪ್ರಸಾದ್ ಅಜಿಲರು ಇದೀಗ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇಲ್ಲಿಯ ಕಾರ್ಯನಿರ್ವಹಣೆಗೆ ಪದೋನ್ನತಿಗೊಂಡಿದ್ದಾರೆ. ಇವರು ಬೆಳ್ತಂಗಡಿ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದು ಇದನ್ನೇ ಪರಿಗಣನೆಗೆ ತೆಗೆದುಕೊಂಡ ಇಲಾಖೆ ಹಾಗೂ ಸರ್ಕಾರ ಈ ನೇಮಕಾತಿ ಪ್ರಕಟಿಸಿದೆ.

ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರರಾಗಿ ಸಮಾಜಸೇವೆಯಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡು ಹೆಸರು ಗಳಿಸಿಕೊಂಡು ಭವಿಷ್ಯದ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಬರೆಯುವ ಪುಸ್ತಕವನ್ನು ಈವರೆಗೆ ಲಕ್ಷಾಂತರ ಮಕ್ಕಳಿಗೆ ವಿತರಿಸಿದ್ದಾರೆ. ಇವರು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರ ಸಹೋದರ.

 

LEAVE A REPLY

Please enter your comment!
Please enter your name here