ಗೇರುಕಟ್ಟೆ: ಪರಪ್ಪು‌ ಬಳಿ  ಕಾರು – ಸ್ಕೂಟಿ  ಡಿಕ್ಕಿ, ದ್ವಿಚಕ್ರ ವಾಹನ ಸವಾರ ಗಂಭೀರ

0

ಗೇರುಕಟ್ಟೆ : ಇಲ್ಲಿಯ ಕೊಯ್ಯೂರು ನಿಂದ ಪರಪ್ಪು ಕಡೆಗೆ ಬರುತ್ತಿದ್ದ ಸ್ಕೂಟಿ ಮತ್ತು ಗೇರುಕಟ್ಟೆ ಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುವಾಗ ಪರಪ್ಪು ತಿರುವಿನಲ್ಲಿ ಪರಸ್ಪರ ಡಿಕ್ಕಿಯಾದ ಘಟನೆ ಸೆ.5 ರಂದು ರಾತ್ರಿ ನಡೆಯಿತು.

ಬೈಪಾಡಿ ಬಾಲಂಪಾಡಿ ನಿವಾಸಿ ಚನನಿ ತನ್ನ ಸ್ಕೂಟಿಯಲ್ಲಿ ಪುತ್ರನ ಜೊತೆ ಪ್ರಯಾಣಿಸುವಾಗ ಪರಪ್ಪು ತಿರುವು ಸಮೀಪದಲ್ಲಿ, ಗೇರುಕಟ್ಟೆ ಯಿಂದ ಉಪ್ಪಿನಂಗಡಿ ಕಡೆಗೆ ತೆರಳುವ ಮಾರುತಿ ಕಾರಿಗೆ ಪರಸ್ಪರ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನ ಸವಾರರ ಕಾಲಿಗೆ ಗಂಭೀರವಾದ ಗಾಯವಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದರು.

ಗಾಯಾಳು ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆ ಗೆ ಸೇರಿಸಲು ಸ್ಥಳೀಯರು ಸಹಕರಿಸಿದರು. ಹಿಂಬದಿಯ  ಪ್ರಯಾಣಿಕ ಪುತ್ರ ನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಕಾರು ಚಾಲಕ ಗೇರುಕಟ್ಟೆ ಸಮೀಪದ ಚೇತನ್ ಮತ್ತು ಪುಟ್ಟ ಮಗು ಪ್ರಾಣಪಾಯದಿಂದ ಪಾರಾಗಿದ್ದಾರೆ.ಸ್ಕೂಟಿ ನಜ್ಜು – ಗುಜ್ಜಾಗಿದೆ. ಅಪಘಾತ ವನ್ನು ತಪ್ಪಿಸಲು ಹೋಗಿ ಕಾರು ಪಕ್ಕದಲ್ಲಿರುವ ಚರಂಡಿ ಬಿದ್ದಿದೆ.ವಿಷಯ ತಿಳಿದ  ವಾಹನ ಸಂಚಾರ ನಿಯಂತ್ರಣ ಪೊಲೀಸ್ ಅಧಿಕಾರಿ ಓಡಿಯ್ಯಪ್ಪ ಗೌಡ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ  ಕೇಸು ದಾಖಲಿಸಿದರು.

ಪರಪ್ಪು ತಿರುವುವಿನಲ್ಲಿ ಆಗಾಗ್ಗೆ ವಾಹನ ಡಿಕ್ಕಿ ನಡೆಯುತ್ತಿದೆ.ಆನತಿ ದೂರದಲ್ಲಿ ಅವೈಜ್ಞಾನಿಕವಾಗಿ ರಸ್ತೆ ದಿಣ್ಣೆ ಅಳವಡಿಸಿರುವ ಇಲಾಖೆಯ ಬಗ್ಗೆ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ವಾಹನ ಸಂಚಾರದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನಾ ಫಲಕ ಅಳವಡಿಕೆ ಮಾಡುವಂತೆ ಸ್ಥಳೀಯರು ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದರು.

LEAVE A REPLY

Please enter your comment!
Please enter your name here