ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಎಸ್ ಸಿ ಘಟಕಕ್ಕೆ ಓಬಯ್ಯಾ ಆರಂಬೊಡಿ ಅಧ್ಯಕ್ಷರಾಗಿ ಆಯ್ಕೆ

0


ಬೆಳ್ತಂಗಡಿ : ವಿಧಾನ ಪರಿಷತ್ ಶಾಸಕ ಜಿಲ್ಲಾ ಕಾಗ್ರೇಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚೇತಕ ಕೆ. ವಸಂತ ಬಂಗೇರ, ಮಾಜಿ ಸಚಿವ ಕೆ. ಗಂಗಾಧರ ಗೌಡ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶೈಲೇಶ್ ಕುಮಾರ್ ಇವರ ಶಿಫಾರಸ್ಸಿನೊಂದಿಗೆ ದಕ್ಷಿಣ ಕನ್ನಡ ಎಸ್ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೆಡಿಯವರು ರಾಜ್ಯ ಅಧ್ಯಕ್ಷರ ಸೂಚನೆ ಅನ್ವಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಓಬಯ್ಯಾ ಆರಂಬೊಡಿ ಇವರನ್ನು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ಇದರ ಎಸ್. ಸಿ. ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಶೇಷ ವೇಣೂರು ಇವರನನ್ನು ಜಿಲ್ಲಾ ಸಮಿತಿ ಸದಸ್ಯರನ್ನಾಗಿ, ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಮೇಲಂತ ಬೆಟ್ಟು ಇವರನ್ನು ಆಯ್ಕೆ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here