ಸ್ಕೂಟಿ ಮತ್ತು ಕೆ. ಎಸ್. ಆರ್. ಟಿ. ಸಿ. ಬಸ್ ನಡುವೆ ಅಪಘಾತ: ತುಂಬೆತ್ತಡ್ಕ ನಿವಾಸಿ ಚೆನ್ನಕೇಶವ ಸ್ಥಳದಲ್ಲೇ ಸಾವು

0

 

ಅರಸಿನಮಕ್ಕಿ : ಇಲ್ಲಿಯ ತುಂಬೆತ್ತಡ್ಕ ನಿವಾಸಿ ಚೆನ್ನಕೇಶವ (28ವ.)ರವರು ಚಿಕ್ಕಮಗಳೂರಿನಲ್ಲಿ ಸ್ಕೂಟಿ ಮತ್ತು ಕೆ. ಎಸ್. ಆರ್. ಟಿ. ಸಿ. ಬಸ್ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೆ.22ರಂದು ನಡೆದಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್ ರೇ ಟೆಕ್ನಿಷನ್ ಆಗಿದ್ದ ಇವರು ರಜೆಯ ಮೇಲೆ ಊರಿಗೆ ಬಂದಿದ್ದು, ಅಜ್ಜಿ ಮನೆಯಾದ ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಒಂದಕ್ಕೆ ಹೋಗುತ್ತಿದ್ದಾಗ ಇವರು ಚಲಾಯಿಸುತ್ತಿದ್ದ ಸ್ಕೂಟಿಗೆ ಕೆ. ಎಸ್. ಆರ್. ಟಿ. ಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟರು.
ಮೃತರು ತಂದೆ ಸಂಜೀವ ರಾಣ್ಯ, ತಾಯಿ ಶೋಭಾ, ತಂಗಿ ಪುಷ್ಪಲತಾ, ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ತುಂಬೆತ್ತಡ್ಕದಲ್ಲಿ ಸೆ.23ರಂದು ಜರುಗಿತು.

LEAVE A REPLY

Please enter your comment!
Please enter your name here