ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇದರ ನೇತೃತ್ವದಲ್ಲಿ, ಲಾಯಿಲ ಹಿಂದೂ ರುದ್ರಭೂಮಿ ಮುಕ್ತಿ ಧಾಮದ ಸ್ವಚ್ಚತಾ ಕಾರ್ಯ

0

ಲಾಯಿಲ: ಓಂ ಶಕ್ತಿ ಗೆಳೆಯರ ಬಳಗ ಲಾಯಿಲ ಇದರ ನೇತೃತ್ವದಲ್ಲಿ ಲಾಯಿಲ ಹಿಂದೂ ರುದ್ರಭೂಮಿ ಮುಕ್ತಿ ಧಾಮದ ಸ್ವಚ್ಚತಾ ಕಾರ್ಯ ಸೆ.25 ರಂದು ನಡೆಯಿತು.

ಓಂ ಶಕ್ತಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸುಮಾರು ಇಪ್ಪತ್ತು ಸದಸ್ಯರು ಹುರುಪಿನಿಂದ ನಿರಂತರ ಎರಡು ಆದಿತ್ಯಾವರದಲ್ಲಿ, ಸೇರಿ ಬೆಳೆದಿದ್ದ ಪೊದೆಗಳ ಸಹಿತ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಚಗೊಳಿಸಿದರು.

ಈ ಸಂದರ್ಭದಲ್ಲಿ ಮುಕ್ತಿ ಧಾಮದ ಪದಾಧಿಕಾರಿಗಳು ಲಘು ಉಪಹಾರ, ಪಾನೀಯದ ವ್ಯವಸ್ಥೆ ಯನ್ನು ಮಾಡಿದ್ದರು. ರುದ್ರಭೂಮಿಯ ಸ್ವಚ್ಚತಾ ಕಾರ್ಯಕ್ಕೆ ರುದ್ರಭೂಮಿ ಸಮಿತಿಯ ಪುರಷೋತ್ತಮ ಶೆಣೈ ರವರು ರುದ್ರಭೂಮಿ ಸಮಿತಿಯ ಪರವಾಗಿ ಓಂ ಶಕ್ತಿ ಗೆಳೆಯರ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here