ಗುರುವಾಯಕೆರೆ: ಇಲ್ಲಿಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರೋನನ್ ಡಿಸೋಜ ನಾಟ(ಅರ್ಟಿತೆಕ್ಚರ್) ದಲ್ಲಿ ರಾಜ್ಯಕ್ಕೆ 25ನೇ ರ್ಯಾಂಕ್ ಗಳಿಸಿ, ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಈ ರ್ಯಾಂಕ್ ಗಳಿಸುವುದು ಕಾಲೇಜಿಗೆ ಮಾತ್ರ ವಲ್ಲದೆ ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ತಿಳಿಸಿದ್ದಾರೆ.
