ಪದ್ಮುಂಜ: ಪದ್ಮುಂಜ ಸರಕಾರಿ ಪ್ರೌಢ ಶಾಲೆಯ ಆವರಣದೊಳಗೆ ಅನಾಥ ಸ್ಕೂಟಿಯೊಂದು ಪತ್ತೆಯಾಗಿದೆ. ಹಲವಾರು ತಿಂಗಳುಗಳಿಂದ ಶಾಲಾ ಆವರಣದೊಳಗೆ ಸ್ಕೂಟಿ ಪತ್ತೆಯಾಗಿದ್ದು ಯಾರೋ ಹಳ್ಳಿ ಪ್ರದೇಶದಿಂದ ಪೇಟೆಕಡೆಗೆ ಕೆಲಸಕ್ಕೆ ಹೋಗುವವರು ನಿಲ್ಲಿಸಿರಬಹುದು. ಸಂಜೆ ಕೆಲಸ ಮುಗಿದು ಸ್ಕೂಟಿ ತೆಗೆದುಕೊಂಡು ಹೋಗಬಹುದು ಎಂದು ಭಾವಿಸಲಾಗಿತ್ತು. ಆದರೆ ಸದ್ರಿ ಸ್ಕೂಟಿ ಇದ್ದ ಜಾಗದಲ್ಲೇ ಇದ್ದುದರಿಂದ ಯಾರ ಗಾಡಿ ಎಂದು ತಿಳಿದುಬಂದಿಲ್ಲ.
