ಎಕ್ಸೆಲ್ ನಲ್ಲಿ ಅಕ್ಷರೋತ್ಸವ ಲಾಂಛನ ಅನಾವರಣ

0

ಧರ್ಮಸ್ಥಳ:  ‘ ಶಿಕ್ಷಣದ ಜೊತೆಗೆ ಕಲೆ ಸಾಹಿತ್ಯ ಸಂಸ್ಕೃತಿ ಪ್ರೀತಿ ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಬರಬೇಕು. ಅಂಥ ಪ್ರಯತ್ನ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲೂ ನಡೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃ ಶ್ರೀ ಹೇಮಾವತಿ ಹೆಗ್ಗಡೆಯವರು ಹೇಳಿದರು.

ಅ. 30 ರಂದು ನಡೆಯುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಅಕ್ಷರೋತ್ಸವ – ರಾಜ್ಯ ಮಟ್ಟದ ಸಾಹಿತ್ಯ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ, ಲಾಂಛನ ಅನಾವರಣ ಗೊಳಿಸಿದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಧ್ಯಾಪಕರಾದ ಸಹನಾ, ಡಾ.ನವೀನ್ ಕುಮಾರ್ ಮರಿಕೆ, ಪುರುಷೋತ್ತಮ್, ನಿಶಾ ಪೂಜಾರಿ, ಶೃತಿ ಶೆಟ್ಟಿ, ರಿತೇಶ್ ಬಿ ಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here