ಶಾಸಕ ಹರೀಶ್ ಪೂಂಜರಿಗೆ ಜೀವ ಬೆದರಿಕೆ, ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಶಿಬಾಜೆ ಗ್ರಾ.ಪಂ ವತಿಯಿಂದ ಮನವಿ

0

ಶಿಬಾಜೆ: ಶಾಸಕ ಹರೀಶ್ ಪೂಂಜರಿಗೆ ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ಒದಗಿಸುವ ಕುರಿತು ಶಿಬಾಜೆ ಗ್ರಾ.ಪಂ ವತಿಯಿಂದ ಮುಖ್ಯಮಂತ್ರಿಗಳಿಗೆ ಬೆಳ್ತಂಗಡಿ ತಾಲೂಕು ಕಛೇರಿ ಮೂಲಕ  ಅ.14ರಂದು ಮನವಿಯನ್ನು ನೀಡಲಾಯಿತು.

ತಾಲೂಕನ್ನು ಅಭಿವೃದ್ಧಿಯತ್ತ ಸಾಗಿಸುವ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕ ಹರೀಶ್ ಪೂಂಜರಿಗೆ ಜೀವ ಬೆದರಿಕೆ ಇದೆ. ಹೀಗಾದ್ದಲ್ಲಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರ ನೈತಿಕ ಬಲ ಕುಸಿಯಲಿದ್ದು ತಾಲೂಕಿನ ಅಭಿವೃದ್ಧಿಗೆ ಸಮರ್ತ ಶಾಸಕರ ಅಗತ್ಯವಿರುತ್ತದೆ. ಯುವ ನಾಯಕರಾಗಿರುವ ಇವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಲವಾರು ತೋರಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವುದಲ್ಲದೆ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಮಾಡಬೇಕೆಂದು ಶಿಬಾಜೆ ಗ್ರಾಮದ ಗ್ರಾಮಸ್ಥರ ಪರವಾಗಿ ಗ್ರಾ.ಪಂ ಅಧ್ಯಕ್ಷರು ರತೀಶ ಬಿ ಇವರು ಮನವಿಯನ್ನು ನೀಡಿದರು.ಈ ಸಂದರ್ಭದಲ್ಲಿ  ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷ ನವೀನ್, ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಕರುಣಾಕರ ಶಿಶಿಲ, ಹಿಂದೂ ಜಾಗರಣ ವೇದಿಕೆಯ ಮಹೇಶ್ ಕೆರೆಕೋಡಿ, ಶಿಬಾಜೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮಾಧವ ಗೌಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here