ಮೂಡುಕೋಡಿ: ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನೆ: ಮ್ಯಾಟ್ ಕಬಡ್ಡಿ ಗ್ರಾಮೀಣ ಪ್ರದೇಶದ ಯುವಶಕ್ತಿಗೆ ಪ್ರೇರಣೆ: ಶಾಸಕ ಹರೀಶ್ ಪೂಂಜ

0

ವೇಣೂರು: ಫ್ರೆಂಡ್ಸ್ ದೈಪಾಲಬೆಟ್ಟು ಮೂಡುಕೋಡಿ ಹಾಗೂ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 65 ಕೆ.ಜಿ. ವಿಭಾಗದ ಮುಕ್ತ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವು ನ. 6ರಂದು ಮೂಡುಕೋಡಿಯ ಬೆದ್ರಡ್ಡ ಮೈದಾನದಲ್ಲಿ ಜರುಗಿತು.

ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ರಾಜ್ಯಮಟ್ಟಕ್ಕೆ ಮಾದರಿಯಾದ ಕ್ರೀಡೆ ಇಲ್ಲಿ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾಳುಗಳಿಗೆ ಕ್ರೀಡಾಸ್ಪೂರ್ತಿ ನೀಡುವ ಕೆಲಸ ಇಲ್ಲಿ ನಡೆದಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಯುವಶಕ್ತಿಗೆ ಪ್ರೇರಣೆ ಆಗಿದೆ. ತಾಲೂಕಿನ ಕ್ರೀಡಾಳುಗಳಿಗೆ, ಕ್ರೀಡಾ ಆಯೋಜಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮ್ಯಾಟನ್ನು ಒದಗಿಸಲಾಗಿದೆ ಎಂದರು. ವೇಣೂರು ದೇವಸ್ಥಾನದ ಬಳಿ ಸೇತುವೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದ್ದು, ಮೂಡುಕೋಡಿಗೆ ನೇರ ಸಂಪರ್ಕ ಸುಲಭದಲ್ಲಿ ಸಾಧ್ಯವಾಗಲಿದೆ, ಸಂಪರ್ಕ ರಸ್ತೆಯನ್ನೂ ಶೀಘ್ರ ಅಭಿವೃದ್ಧಿ ಪಡಿಸಲಾಗುವುದು ಎಂದರು.

ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಅವರು ಅಧ್ಯಕ್ಷತೆ ವಹಿಸಿ, ಸಂಘಟನೆಯಿಂದ ಸಮಾಜಮುಖಿ ಕಾರ್ಯ ಸಾಧ್ಯ. ಒಗ್ಗಟ್ಟಿನಲ್ಲಿ ಬಲ ಜಾಸ್ತಿ, ನವ ಬೆಳ್ತಂಗಡಿ ನಿರ್ಮಾಣದ ಕನಸನ್ನು ಹೊಂದಿರುವ ಶಾಸಕರಿಂದ ತಾಲೂಕು ಸಮಗ್ರ ಅಭಿವೃದ್ಧಿ ಕಾಣುತ್ತಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಸಮಾರಂಭ ಉದ್ಘಾಟಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆಗಮಿಸಿದ್ದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ವೇಣೂರಿನ ಪ್ರಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್, ಮೂಡಬಿದಿರೆಯ ಖ್ಯಾತ ನ್ಯಾಯವಾದಿ ನಾಗೇಶ್ ಶೆಟ್ಟಿ, ವೇಣೂರಿನ ಉದ್ಯಮಿಗಳಾದ ವಿ.ಕೆ. ವಸಂತ ಕೋಟ್ಯಾನ್, ಸುದತ್ ಜೈನ್ ಪ್ರಮುಖರಾದ ಅಶೋಕ್ ಜೈನ್ ಪಕ್ಕಳಗುತ್ತು, ಮೋಹನ್ ಅಂಡಿಂಜೆ, ಸೌಮ್ಯ ಸುಂದರ ಹೆಗ್ಡೆ, ಸೋಮಿನಿ ಹೆಗ್ಡೆ, ಹರೀಶ್ ಪಿ.ಎಸ್., ನಾರಡ್ಕ ಶಶಿಧರ ಶೆಟ್ಟಿ, ಅನೂಪ್ ಜೆ. ಪಾಯಸ್, ರಾಜೇಶ್ ಪೂಜಾರಿ ಮೂಡುಕೋಡಿ, ಫ್ರೆಂಡ್ಸ್ ದೈಪಾಲಬೆಟ್ಟು ಇದರ ಗೌರವಾಧ್ಯಕ್ಷ ಧನಂಜಯ ಜೈನ್, ಅಧ್ಯಕ್ಷ ಶ್ಯಾಮ್ ಪೂಜಾರಿ ಕಳಸೊಟ್ಟು, ಉಪಾಧ್ಯಕ್ಷರುಗಳಾದ ಸುದೀಪ್, ಸುಶಾಂತ್ ನಾಯ್ಕ, ಜತೆ ಕಾರ್ಯದರ್ಶಿ ಶೇಖರ ನಾಯ್ಕ, ಕೋಶಾಧಿಕಾರಿ ಚೈತ್ರನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಜಗನ್ನಾಥ ದೇವಾಡಿಗ ಪ್ರಾರ್ಥಿಸಿ, ಫ್ರೆಂಡ್ಸ್ ದೈಪಾಲಬೆಟ್ಟು ಇದರ ಕಾರ್ಯದರ್ಶಿ ಮಾಣಿಕ್ಯರಾಜ್ ಜೈನ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here