ಕಳಿಯ: ಕಾನೂನು ಅರಿವಿನ ಮೂಲಕ ನಾಗರೀಕರಣ ಸಬಲೀಕರಣ ಅಭಿಯಾನ-2022: ಜನಸಾಮಾನ್ಯರಿಗೆ ಕಾನೂನು ನ್ಯಾಯದ ಅರಿವಿನ ನೆರವು ಅಗತ್ಯ

0


ಕಳಿಯ : ದ.ಕ.,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ಬೆಳ್ತಂಗಡಿ ತಾಲೂಕು ಕಾನೂನು ಸೇವಗಳ ಸಮಿತಿ,ವಕೀಲರ ಸಂಘ (ರಿ) ಬೆಳ್ತಂಗಡಿ,ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್‌ಗಳ ನೇತೃತ್ವದಲ್ಲಿ ಕಾನೂನು ಅರಿವಿನ ಮೂಲಕ ನಾಗರೀಕರಣ ಸಬಲೀಕರಣ ಅಭಿಯಾನ ಕಾರ್ಯಕ್ರಮ ನ.10 ರಂದು ಕಳಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಕಾನೂನು ಎಂಬುದು ನಿರಂತರ ಪ್ರಕ್ರಿಯೆ.ಕಾನೂನಿನ ತಿಳುವಳಿಕೆಯಿಂದ ಸ್ವಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ.ಜನಸಾಮಾನ್ಯರಿಗೆ ಕಾನೂನು ನ್ಯಾಯದ ಅರಿವಿನ ನೆರವು ನೀಡುವುದರಿಂದ ಒಮ್ಮತದ ನಿರ್ಣಯಗಳು ಮೂಡಿ ಸಮಸ್ಯೆಗಳು ಸಮಾನತೆ ಮೂಲಕ ಬಗೆಹರಿಯಲು ಸಾಧ್ಯ ಎಂದು ವಕೀಲೆ ಸುಭಾಷಿಣಿ.ಆರ್ ಹೇಳಿದರು.

ಕಾನೂನುಗಳ ಜ್ಞಾನವು ಅನಾಹುತಗಳನ್ನು ತಪ್ಪಿಸಲು ಸಹಕಾರಿ. ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬನ ಕರ್ತವ್ಯ.ಕಾನೂನಿನ ಅರಿವಿಲ್ಲದೆ ಮಾಡುವ ಮೊಂಡುವಾದಗಳು ಸಮಸ್ಯೆಗಳನ್ನು ಸೃಷ್ಟಿಸುವ ಮೂಲವಾಗಿದೆ ಎಂದು ಹೇಳಿದರು.

ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಸಮಿತಿ ಸದಸ್ಯರಾದ ಮುಮ್ತಾಜ್ ಬೇಗಂ,ಮಾಹಿತಿದಾರರಾದ ಪ್ರಿಯಾಂಕ ಕೆ.,ಕಾನೂನು ಸ್ವಯಂಸೇವಕರಾದ ರಾಘವೇಂದ್ರ ಶೇಟ್,ದಯಾನಂದ , ಕಳಿಯ ಪಂ.ಉಪಾಧ್ಯಕ್ಷೆ ಕುಸುಮ ಎನ್ ಬಂಗೇರ,ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂ.ಸದಸ್ಯರಾದ ದಿವಾಕರ ಎಂ,ಸುಧಾಕರ ಮಜಲು,ಅಬ್ದುಲ್ ಕರೀಂ,ವಿಜಯ ಕುಮಾರ್ ಕೆ,ಯಶೋದರ ಶೆಟ್ಟಿ ಕೆ,ಲತೀಪ್,ಮೋಹಿನಿ ಬಿ ಗೌಡ,ಮರೀಟಾ ಪಿಂಟೋ,ಶ್ವೇತಾ,ಪುಷ್ಪ,ಶಕುಂತಳಾ,ಇಂದಿರಾ ಬಿ ಶೆಟ್ಟಿ,ಅಂಗನವಾಡಿ ಕಾರ್ಯಕರ್ತೆಯರು,ಪಂ.ಸಿಬ್ಬಂದಿಗಳು,ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here