ಮಾಯ ಸ. ಉ. ಪ್ರಾ.ಶಾಲೆ ವಿದ್ಯಾರ್ಥಿನಿ ಕು. ಜಾಹ್ನವಿ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ

0

ಬೆಳ್ತಂಗಡಿ :ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ನ.11ರಂದು ಕಟೀಲಿನಲ್ಲಿ ನಡೆದ ರಾಜ್ಯ ಮಟ್ಟದ
ಕರಾಟೆ ಸ್ಪರ್ಧೆಯಲ್ಲಿ ಬೆಳಾಲಿನ ಮಾಯ ಸ. ಉ. ಪ್ರಾಥಮಿಕ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಜಾಹ್ನವಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬೆಳಾಲು ಗ್ರಾಮದ ಹಳೆಮನೆ ಬಾಲಕೃಷ್ಣ ಹಾಗೂ ಜಯಮಣಿ ದಂಪತಿ ಪುತ್ರಿ.

22- 26 ಕೆ. ಜಿ.ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಮಿಥುನ್ ಕುಮಾರ್ ಬೆಳಾಲು ಇವರು ತರಬೇತಿ ನೀಡಿರುತ್ತಾರೆ. ಜೊತೆಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕ ವೃಂದ ಅಗತ್ಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.

LEAVE A REPLY

Please enter your comment!
Please enter your name here