ಉಜಿರೆ: ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜು ಉಜಿರೆ ಹಾಗೂ ಮೇದಿನಿ ಟೆಕ್ನಾಲಜೀಸ್ ನಡುವೆ ಒಡಂಬಡಿಕೆ

0

ಉಜಿರೆ: ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜು ಉಜಿರೆಯು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವಿಕಾಸ ಹಾಗೂ ಉದ್ಯೋಗ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಮೇದಿನಿ ಟೆಕ್ನಾಲಜೀಸ್ ಜೊತೆ ನ.8ರಂದು ಒಡಂಬಡಿಕೆ ಮಾಡಿಕೊಂಡಿದೆ.ಈ ಒಡಂಬಡಿಕೆಯಿಂದ ವಿದ್ಯಾರ್ಥಿಗಳಿಗೆ ನೂತನ ಸಿವಿಲ್ ಇಂಜಿನಿಯರಿಂಗ್ ಸಾಫ್ಟ್ ವೇರ್ ಗಳಲ್ಲಿ ತರಬೇತಿ ಲಭಿಸಲಿದೆ.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಅಶೋಕ್ ಕುಮಾರ್, ಮೇದಿನಿ ಟೆಕ್ನಾಲಜೀಸ್ ನ ನಿರ್ದೇಶಕರಾದ ಅಭಿನಂದನ್ ಕಬ್ಬೂರು, ಇಂಜಿನಿಯರಿಂಗ್ ಮೋಹನ್ ಕುಮಾರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಗಿರೀಶ್ ಕುಮಾರ್, ಪ್ರೊ.ರಾಮ್ ಪ್ರಸಾದ್, ನೇಮಕಾತಿ ಅಧಿಕಾರಿ ಡಾ.ಸುಬ್ರಹ್ಮಣ್ಯ, ಸಿವಿಲ್ ಹಾಗೂ ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here