ಪೆರಿಂಜೆ: ವಿದ್ಯಾರ್ಥಿಗಳ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ “ಭವಿಷ್ಯ ನಿರ್ಮಾಣ” ತರಬೇತಿ ಕಾರ್ಯಕ್ರಮ

0

ಪೆರಿಂಜೆ:  ಇನ್ನರ್ ವೀಲ್ ಕ್ಲಬ್, ಮೂಡಬಿದ್ರೆ, ಫ್ರೆಂಡ್ಸ್ ಕ್ಲಬ್ (ರಿ) ಹೊಸಂಗಡಿ ಮತ್ತು ಆಳ್ವಾಸ್ ಸಮಾಜ ಕಾರ್ಯ ಕಾಲೇಜು, ಮೂಡಬಿದ್ರೆ ಇವರ ಸಂಯುಕ್ತ ಆಶ್ರಯದಲ್ಲಿ, ಎಸ್.ಡಿ.ಎಂ. ಪ್ರೌಢಶಾಲೆ,ಪೆರಿಂಜೆ ಇವರ ಸಹಕಾರದೊಂದಿಗೆ,

ನ.12 ರಂದು ಎಸ್. ಡಿ.ಎಂ.ಪ್ರೌಢಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ “ಭವಿಷ್ಯ ನಿರ್ಮಾಣ” ತರಬೇತಿ ಕಾರ್ಯಕ್ರಮ ನೆರವೇರಿತು.

ಆಳ್ವಾಸ್ ಸಮಾಜ ಕಾರ್ಯ ಕಾಲೇಜು ಉಪನ್ಯಾಸಕಿ ಶ್ರೀಮತಿ ರೆನಿಟ ಇವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಪೆರಿಂಜೆ ಗುತ್ತು ಶ್ರೀಮತಿ ರಸಿಕ ಜಯರಾಜ ಕಂಬಳಿ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್, ಮೂಡುಬಿದ್ರಿ ಇದರ ಅಧ್ಯಕ್ಷರಾದ ರಮ್ಯಾ ವಿಕಾಸ್ ಜೈನ್ ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕರಾದ ಸುಧೀರ್ ಇವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಯೋಜಕರಾದ ಫ್ರೆಂಡ್ಸ್ ಕ್ಲಬ್ (ರಿ ) ಹೊಸಂಗಡಿ ಇದರ ಅಧ್ಯಕ್ಷರಾದ ಹರಿಪ್ರಸಾದ್. ಪಿ. ಇವರು ತರಬೇತಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.

ಆಳ್ವಾಸ್ ಸಮಾಜ ಕಾರ್ಯ ಕಾಲೇಜು ವಿದ್ಯಾರ್ಥಿಗಳಾದ ಕು ಹರಿಣಿ ಸ್ವಾಗತಿಸಿ, ರಚನ್ ಧನ್ಯವಾದವಿತ್ತರು. ಧನಿಶ್ ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here